ಬೆಂಗಳೂರು: ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಗ್ ಶಾಕ್ ಎದುರಾಗಿದೆ. ಮುಡಾ ಸೈಟು ಅಕ್ರಮ ಹಂಚಿಕೆ ಪ್ರಕರಣವನ್ನು ತನಿಖೆ ನಡೆಸಲು ಗೌರ್ನರ್ ನೀಡಿದ್ದ ಅನುಮತಿ ಪ್ರಕ್ರಿಯೆಗೆ ಹೈಕೋರ್ಟ್ ಅಸ್ತು ಎಂದಿದೆ. ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಗೊಳಿಸಿರುವ ನ್ಯಾಯಮೂರ್ತಿ ನಾಗ ಪ್ರಸನ್ನ ನೇತೃತ್ವದ ಪೀಠ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿದೆ.
ಗೌರ್ನರ್ ಆದೇಶವನ್ನು ಹೈಕೋರ್ಟ್ ಪೀಠ ಎತ್ತಿ ಹಿಡಿದಿದ್ದು ದೂರುದಾರರಾದ ಸ್ನೇಹ ಮಯಿ ಕೃಷ್ಣ, ಪ್ರದೀಪ್ ಹಾಗೂ ಟಿ.ಜೆ ಅಬ್ರಹಾಂ ಅವರ ವಾದಕ್ಕೆ ಮನ್ನಣೆ ಸಿಕ್ಕಿದೆ. ಮೂಡ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕುಟುಂಬ ಫಲಾನುಭವಿ ಆಗಿದೆ ಹಾಗಾಗಿ ಈ ಪ್ರಕರಣದ ತನಿಖೆ ನಡೆಸುವುದು ಸೂಕ್ತ ಎಂದು ಪೀಠ ಅಭಿಪ್ರಾಯ ಪಟ್ಟಿದೆ. ಹೈ ಕೋರ್ಟ್ನ ಈ ತೀರ್ಪನ್ನು ವಿಭಾಗಿಯ ಪೀಠದಲ್ಲಿ ಪ್ರಶ್ನೆ ಮಾಡುವುದಾಗಿ ಮತ್ತು ಪ್ರಶ್ನಿಸುವದಾಗಿ ಸಿದ್ದರಾಮಯ್ಯ ಪರ ವಕೀಲರು ಹೇಳಿದ್ದಾರೆ.
ಮುಡಾ ಅಸ್ತ್ರ ಮುಂದಿಟ್ಟು ಸಿದ್ಧರಾಮಯ್ಯ ಅವರ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿದ್ದವು ಆದರೆ ಹೈಕಮಾಂಡ್ ಸಿದ್ದರಾಮಯ್ಯ ಅವರ ಪರ ನಿಂತಿತ್ತು. ಇದೀಗ ಮತ್ತೆ ಪಕ್ಷಗಳ ಬಾಯಲ್ಲಿ ಸಿಎಂ ರಾಜೀನಾಮೆ ಕೊಟ್ಟು ಕೇಳಿ ಬಂದರು ಆಶ್ಚರ್ಯವಿಲ್ಲ.

