ನಿಗಮದ ಕಚೇರಿಯಲ್ಲಿ ನಾಪತ್ತೆಯಾದ ಅನಿಲಭಾಗ್ಯ ಅಡುಗೆ ಒಲೆಗಳು
ವರದಿ: ಕುದಾನ್ ಸಾಬ್
ಸತ್ಯಕಾಮ ವಾರ್ತೆ ಯಾದಗಿರಿ:
ರಾಜ್ಯದಲ್ಲಿ ಸಿಎಂ ಸಿದ್ಧರಾಮಯ್ಯನವರ ಕನಸಿನ ಮಹತ್ವಾಕ್ಷಾಂಕ್ಷಿ ಯೋಜನೆಯಾದ ಅನಿಲ ಭಾಗ್ಯ ಯೋಜನೆಗೆ ಯಾದಗಿರಿಯ ಆಹಾರ ಇಲಾಖೆ ಅಧಿಕಾರಿಗಳು ಎಳ್ಳುನೀರು ಬಿಟ್ಟಿದ್ದೂ,ಜಿಲ್ಲೆಯ ಕರ್ನಾಟಕ ಆಹಾರ ಸರಬರಾಜು ನಿಗಮ ನಿಯಮಿತ ಕಛೇರಿಯಲ್ಲಿ ಅನಿಲ ಭಾಗ್ಯ ಯೊಜನೆಯ ಅರ್ಹ ಪಲಾನುಭವಿಗಳಿಗೆ ತಲುಪಬೇಕಾದ ಅಡುಗೆ ಒಲೆಗಳು ಮೂಲೆ ಗುಂಪಾಗಿವೆ.
ಅಡುಗೆ ಅನಿಲ ಸಂಪರ್ಕರಹಿತ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ ನೀಡಲು 2017-18ರ ಬಜೆಟ್ನಲ್ಲಿ ಅಂದಿನ ಸರ್ಕಾರ “ಮುಖ್ಯಮಂತ್ರಿ ಅನಿಲಭಾಗ್ಯ ಯೋಜನ ನಿಗಧಿಪಡಿಸಲಾಗಿತ್ತು…
ಅದರಂತೆ ಯಾದಗಿರಿ ಜಿಲ್ಲೆಗೆ 4902 ಬಿಪಿಎಲ್ ಕಾರ್ಡ್ದಾರರಿಗೆ ಅನಿಲಭಾಗ್ಯ ಯೋಜನೆ ಗುರಿಪಡಿಸಿತ್ತು, ಆದೇಶದಂತೆ ಜಿಲ್ಲೆಗೆ ಸರ್ಕಾರದಿಂದ 4390 ಸ್ಟೌವ್ಗಳು ಮಾತ್ರ ಬಂದಿತ್ತು. ಇದರಲ್ಲಿ 4092 ಗ್ಯಾಸ್ ಸ್ಟೋವ್ ಗಳನ್ನು ವಿತರಣೆ ಮಾಡಲಾಗಿದೆ.
- Advertisement -
ಈ ವೇಳೆ ಉಳಿಯಬೇಕಾದ 298 ಸ್ಟೌವ್ಗಳ ಪೈಕಿ 166 ಸ್ಟೌವ್ಗಳ ಕಚೇರಿಯಲ್ಲಿದ್ದೂ 132 ಗ್ಯಾಸ್ ಸ್ಟೋವ್ ಗಳು ಅಧಿಕಾರಿಗಳ ಬೇಜವಾಬ್ದಾರಿತನದಿಂದ ಗೋದಾಮಿನಿಂದ ನಾಪತ್ತೆಯಾಗಿವೆ..
ನಾಪತ್ತೆಯಾಗಿರುವ 132 ಅಡುಗೆ ಅನಿಲ ಒಲೆಗಳ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನಿಸಿದರೆ ಆಹಾರ ಇಲಾಖೆ ಅಧಿಕಾರಿಗಳು KFCSC ಮೇಲೆ, KFCSCಯವರು ಆಹಾರ ಇಲಾಖೆಯವರು ಮೇಲೆ ಒಬ್ಬರನ್ನೊಬ್ಬರು ದೂರುತ್ತಿದ್ದಾರೆ ಹೊರತು ನಾಪತ್ತೆಯಾದ ಸ್ಟೌವ್ ಗಳು ಎಲ್ಲಿ ಹೋಗಿವೆ ಎಂಬುದನ್ನಾ ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ.
ಅದರಲ್ಲೂ ಪ್ರಮುಖವಾಗಿ ಕಚೇರಿಯಲ್ಲಿ ಇರಬೇಕಿದ್ದ 298 ಸ್ಟೋವ್ ಗಳ ಪೈಕಿ ಉಳಿದ 166 ಸ್ಟೋವ್ ಗಳನ್ನೂ ಫಲಾನುಭವಿಗಳಿಗೆ ಕೊಡದೇ ಫಲಾನುಭವಿಗಳಿಗೆ ಹಂಚಲು ಇನ್ನೂ 512 ಅನಿಲ ಗ್ಯಾಸ್ ಗಳು ಬೇಕು ಎಂದು ಜಿಲ್ಲಾ ಆಹಾರ ಇಲಾಖೆ ಬೇಡಿಕೆ ಇಟ್ಟಿತ್ತು.
ಸದ್ಯ ಗೋದಾಮುನಿಲ್ಲಿರುವ 167 ಗ್ಯಾಸ್ ಸ್ಟೋವ್ ಗಳು ನಿತ್ರಾಣ ಸ್ಥಿತಿಯಲ್ಲಿದ್ದು, ಆಹಾರ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು, ಈ ಹಿಂದೆ ಅನಿಲ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡುತ್ತದೇಯಾ ಅಥವಾ ತಮ್ಮ ಮೊಂಡತನದಿಂದ ಗೋದಾಮಿನಲ್ಲಿ ತುಕ್ಕು ಹಿಡಿಯಲು ಬಿಟ್ಟು ಸರ್ಕಾರದ ಹಣವನ್ನು ಪೋಲು ಮಾಡಲು ಬಿಡುತ್ತಾರಾ ಎಂಬುದು ಕಾದು ನೋಡಬೇಕಿದೆ.
ಆಹಾರ ಇಲಾಖೆ ಅಧಿಕಾರಿಗಳಿಗೆ ಚಾಟಿ ಬೀಸುವರಾ ಜಿಲ್ಲಾಧಿಕಾರಿ.?
- Advertisement -
ಇತ್ತೀಚಿಗೆ ಜಿಲ್ಲೆಯ ಆಹಾರ ಇಲಾಖೆಯ ಮೇಲೆ ಹಲವು ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ. ಅದರಲ್ಲಿ ಈ ಅನಿಲ ಭಾಗ್ಯ ಕೂಡ ಒಂದು ಆಗಿದ್ದು, ಫಲಾನುಭವಿಗಳಿಗೆ ತಲುಪಬೇಕಾದ ಗ್ಯಾಸ್ ಸ್ಟೋವ್ ಗಳು ಗೋದಾಮಿನಲ್ಲಿ ಹಾಗೂ ಅಧಿಕಾರಿಗಳ ಪಾಲಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಆಹಾರ ನಿಗಮ ನಿಯಮಿತ ಕಛೇರಿಯಲ್ಲಿ ಆಡುಗೆ ಅನಿಲ ಭಾಗ್ಯ ಒಲೆಗಳು ಉಳಿಯಲು ಕಾರಣರಾದ ಭ್ರಷ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಚಾಟಿ ಬೀಸುವರಾ ಎಂಬುದನ್ನ ಕಾದು ನೋಡಬೇಕಿದೆ.
===========================
ಇಲಾಖೆ ಬಳಿಯಿಲ್ಲ ಅರ್ಜಿಗಳ ಮಾಹಿತಿ
- Advertisement -
ಅನಿಲ ಭಾಗ್ಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆಹಾರ ಇಲಾಖೆಗೆ ಎಷ್ಟು ಅರ್ಜಿಗಳು ಬಂದಿವೆ ಹಾಗೂ ವಿತರಿಸಲಾಗಿರುವ ಫಲಾನುಭವಿಗಳ ಮಾಹಿತಿ ಸೇರಿದಂತೆ ಅನಿಲ ಭಾಗ್ಯದ ದಾಖಲಾತಿಗಳು ಇಲಾಖೆ ಬಳಿಯಿಲ್ಲ.
==================================
ನಾಪತ್ತೆಯಾದ ಸ್ಟೋವ್ ಗಳಲ್ಲಿ ನಿವೃತ್ತಿಗೊಂಡ ಗೋದಾಮು ವ್ಯವಸ್ಥಾಪಕನ ಕೈವಾಡ.?
ಈ ಹಿಂದೆ ನಿಗಮದಲ್ಲಿ ಗೊದಮು ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಬಸವಂತ ರೆಡ್ಡಿಯವರು ಅನಿಲ ಭಾಗ್ಯ ಯೋಜನೆಯ ಒಲೆಗಳನ್ನು ವಿತರಿಸುವಲ್ಲಿ ಗೋಲ್ ಮಾಲ್ ಮಾಡಿರುವ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, ಬಸವಂತ ರೆಡ್ಡಿಯವರು 42 ಅನಿಲ ಭಾಗ್ಯ ಯೋಜನೆಯ ಒಲೆಗಳನ್ನು ನಾಯ್ಕಲ್ ಗ್ರಾಮದಲ್ಲಿರುವ ಭಾರತ್ ಗ್ಯಾಸ್ ಏಜೆನ್ಸಿಗೆ ನೀಡಿರುವುದರ ಸ್ವೀಕೃತಿ ಪತ್ರ ಪತ್ರಿಕೆಗೆ ಲಭ್ಯವಾಗಿದ್ದು, ಪತ್ರಿಕೆ ಅದನ್ನು ಸೂಕ್ಷ್ಮವಾಗಿ ಪರಿಗಣಿಸಿ ಬಸವಂತ ರೆಡ್ಡಿಯವರು ಸ್ವೀಕೃತಿ ಪತ್ರದಲ್ಲಿ ಸಹಿ ತೆಗೆದುಕೊಂಡಿರುವವರ ಏಜೆನ್ಸಿಯನ್ನು ಸಂಪರ್ಕಿಸಿದಾಗ ಸ್ವೀಕೃತಿ ಪತ್ರದಲ್ಲಿ ಸಹಿ ಮಾಡಿರುವವರು 2018 ರಲ್ಲಿ ಭಾರತ್ ಗ್ಯಾಸ್ ನಿಂದ ಕೆಲಸ ಬಿಟ್ಟಿದ್ದಾರೆಂದು ಖುದ್ದಾಗಿ ಭಾರತ್ ಗ್ಯಾಸ್ ಏಜೆನ್ಸಿ ಮಾಲೀಕ ಸತ್ಯಕಾಮ ಪತ್ರಿಕೆಗೆ ತಿಳಿಸಿದ್ದಾರೆ. ಹಾಗಾದರೇ ನಿವೃತ್ತಿಗೊಂಡ ಗೋದಾಮು ವ್ಯವಸ್ಥಾಪಕ ಬಸವಂತ ರೆಡ್ಡಿಯವರು ಆತನ ಸಹಿಯನ್ನೇ ನಕಲಿ ಮಾಡಿದ್ರಾ ಅನುಮಾನವಿಗ ವ್ಯಕ್ತವಾಗುತ್ತಿದ್ದೂ, ಈ ಅನಿಲಭಾಗ್ಯದಲ್ಲಿನ ಸೂಕ್ತ ಮಾಹಿತಿ ದೊರೆಯಾಗಬೇಕಾದರೇ ನಿವೃತ್ತಿಗೊಂಡ ಗೋದಾಮು ವ್ಯವಸ್ಥಾಪಕನ ವಿರುದ್ಧ ಸೂಕ್ತ ತನಿಖೆ ನಡೆಸಿಬೇಕಾಗಿದೆ.

