ಹುಮ್ನಾಬಾದ : — ಹುಮ್ನಾಬಾದ ಪಟ್ಟಣದ ಗೋಡಾನ್ವಂದರಲ್ಲಿ ನಕಲಿ ಅನಧಿಕೃತ ಗೊಬ್ಬರ ತಯಾರಿಕೆ ಮತ್ತು ಮಾರಾಟದ ಜಾಲವೊಂದನ್ನು ಪೊಲೀಸರು ಪತ್ತೆ ಹಚ್ಚಿ ಪ್ರಕರಣ ಒಂದನ್ನು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಉನ್ನತಮೂಲಗಳಿಂದ ವರದಿಯಾಗಿದೆ .
ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಚನ್ನಬಸಣ್ಣ ಎಸ್ ಎಲ್ ಹಾಗೂ ಹೆಚ್ಚುವರಿ ಎಸ್ ಪಿ ಶ್ರೀ ಮಹೇಶ್ ಮೇಘಣ್ಣನವರ ದಿವ್ಯ ನಿರ್ದೇಶನದಲ್ಲಿ ಹುಮ್ನಾಬಾದ್ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಅನಧಿಕೃತ ನಕಲಿ ಗೊಬ್ಬರ ತಯಾರಿಸಿ ಸರ್ಕಾರದ ಪರವಾನಿಗೆ ಇಲ್ಲದೆ ಗೌಡನ್ ಒಂದರಲ್ಲಿ ಶೇಖರಿಸಿಟ್ಟ ಮಾಹಿತಿ ಪಡೆದ ಅವರು ಕೃಷಿ ಇಲಾಖೆಯವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ನಕಲಿ ಗೊಬ್ಬರ ಸಂಗ್ರಹಿಸಲ್ಪಟ್ಟ ಗೋಡಾನ್ ಮೇಲೆ ಸಿನಿಮಯ ರೀತಿಯಲ್ಲಿ ಹಲ್ಲೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಅಕ್ರಮ ಗೊಬ್ಬರ ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬಲ್ಲ ಮೂಲಗಳಿಂದ ವರದಿಯಾ

