Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News | Feature Article

ಪ್ರವಾಸಿ ತಾಣಗಳ ಪರಿಚೆಯಾತ್ಮಕ ಪುಸ್ತಕ  ಬಿ ಎಸ್ ದೇಸಾಯಿ ಅವರ ಕನಸುಗಳ ಕಡಲಾಚೆ

news_1791702465_0_355.webp

 

 ಸದಾ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಬಂದಿಲ್ಲೊಂದು ಸಾಹಸ ಕಾರ್ಯದಲ್ಲಿ ಭಾಗಿಯಾಗುತ್ತ ವಿದೇಶಿ ಪ್ರವಾಸಗಳ ಕೈಕೊಂಡು ಅಲ್ಲಿಯ ಸಂಸ್ಕೃತಿಯನ್ನು ಅರಿತುಕೊಂಡು ಅಂತಹ ವಿಭಿನ್ನ ಸಂಸ್ಕೃತಿಯನ್ನು ಪರಿಚಯಿಸುವ ಸಲುವಾಗಿ ನಿವೃತ್ತ ಫಾರ್ಮಸಿ ಅಧಿಕಾರಿಯಾಗಿರುವ ಡಾ. ಬಿಎಸ್ ದೇಸಾಯಿ ಅವರು ಇತ್ತೀಚಿಗೆ ಅಮೆರಿಕ ಪ್ರವಾಸವನ್ನ ಕೈಕೊಂಡು ಅಲ್ಲಿಯ ಕೆಲವು ತಾಣಗಳ ವಿಭಿನ್ನ ನೋಟಗಳ ಮೂಲಕ ಪರಿಚಯಿಸುವ ಕನಸುಗಳ ಕಡಲಾಚೆ ಎಂಬ ಚಿಕ್ಕ ಹೊತ್ತಿಗೆಯನ್ನು ತಂದಿರುವುದು ಮೆಚ್ಚುವಂತಹ ವಿಷಯವಾಗಿದೆ.
 ಈ ಕಿರುಹೊತ್ತಿಗೆಯನ್ನು ಯಶಸ್ ಹಿರೇಮಠ್ ಹಾಗೂ ಮಹಾನಂದ ಎಸ್ ಡಿ ಅವರು ಮುದುರಿಸಿ ಪ್ರಕಾಶಿಸಿದ್ದಾರೆ ಇಲ್ಲಿ ಲೇಖಕರ ನುಡಿಯಲ್ಲಿ ದೇಸಾಯಿ ಅವರು ತಮ್ಮ ಪ್ರವಾಸಿ ಅನುಭವಗಳ ಕುರಿತು ಚಿಕ್ಕ ಬರಹದಲ್ಲಿ ಅಘಾದ ಮಾಹಿತಿಯನ್ನು ತಂದಿಸಿದ್ದಾರೆ ಕಲ್ಬುರ್ಗಿಯ ಬಿಸಿಲೆ ನಾಡಿನಿಂದ ಅಮೆರಿಕದ ಶಿಸ್ತಿನ ಬದುಕಿನವರಿಗೆ ಕೈಕೊಂಡ 60 ಮೂರು ದಿನಗಳ ಪಯಣವನ್ನು ಅವರು ಬದುಕಿನಲ್ಲಿ ಎಂದು ಮರೆಯದ ಗಳಿಗೆಯಾಗಿದೆ ಎಂದು ಹೇಳುತ್ತಾ ಋತು ಜೀವನದ ಜವಾಬ್ದಾರಿಗಳಿಂದ ನಿವೃತ್ತರಾದ ನಂತರ ಪತ್ನಿ ವಿಜಯಲಕ್ಷ್ಮಿ ಯವರೊಂದಿಗೆ ಅಮೆರಿಕದ ಕೇವಲ ಒಂದು ದೇಶವಾಗಿರಲಿಲ್ಲ ಅದು ನಮ್ಮ ಮಕ್ಕಳ ಸಾಧನೆಯ ಪ್ರತಿರೂಪಕವಾಗಿದೆ ಎಂದು ಬಲು ಹಿಗ್ಗಿನಿಂದ ಹೇಳಿರುವ ಮಾತು ಕಿರುಹೊತ್ತಿಗೆ ಮೆರಗನ್ನ ಕೊಟ್ಟಿದೆ.
 ಲೇಖಕರು ಇಲ್ಲಿ ತಾವು ಪ್ರವಾಸ ಕೈಕೊಂಡ ಸಂದರ್ಭದಲ್ಲಿ ಅಲ್ಲಿ ಕಂಡ ದೃಶ್ಯಗಳನ್ನು ಯಥಾವತ್ತಾಗಿ ವಿವರಿಸದೆ ಒಬ್ಬ ತಂದೆಯಾಗಿ ಅನುಭವಿಸಿದ ಚಿಕ್ಕ ಚಿಕ್ಕ ಘಟನೆಗಳನ್ನು ಸಹ ಹೆಮ್ಮೆಯಿಂದ ವಿವರಿಸುತ್ತಾ ಹೋಗುತ್ತಿರುವ ಬರಹ ಓದುತ್ತಾ ಹೋದಂತೆ ಕುತೂಹಲ ಭರಿತವಾಗಿದೆ ಒಬ್ಬ  ಭಾರತೀಯನಾಗಿ ಕಂಡ ಹೊಸ ಅನುಭವಗಳನ್ನು ಹೊಸ ದೃಷ್ಟಿಕೋನದಿಂದ ಮತ್ತು ನಮ್ಮ ಸಂಸ್ಕಾರ ಸಂಸ್ಥೆಗಳ ಸೌಲನಿಕ ನೋಟವನ್ನು ತಮ್ಮದೇ ಆದ ದಾಟಿಯಲ್ಲಿ ಅಕ್ಷರರೂಪಕ್ಕೆ ಇಳಿಸಿರುವುದು ಸಾಕಷ್ಟು ಖುಷಿ ಪಡುವ ವಿಷಯವಾಗಿದೆ.
 ಅಮೇರಿಕಾ ಭೌತಿಕ ಸುಖಗಳಿಗಿಂತ ಅಲ್ಲಿನ ಶಿಸ್ತು ಮತ್ತು ನಮ್ಮ ಮಕ್ಕಳಾದ ದೀಪ ಸುಶ್ಮಿತಾ ಹಾಗೂ ಚೇತನ್ ಸೌಂದರ್ಯ ಅವರ ಅವಿನಾಭಾವ ಪ್ರೀತಿ ನನ್ನನ್ನು ಹೆಚ್ಚು ಭಾವುಕನನ್ನಾಗಿಸಿತು ಎಂದು ಹೇಳುವಾಗಿನ ಮಾತುಗಳು ಈ ಕಿರುಹೊತ್ತಿಗೆಗೆ ಇನ್ನಷ್ಟು ಮತ್ತಷ್ಟು ಮೆರಗನ್ನ ಕೊಟ್ಟಿದೆ ಈ ಭಾವಸಾಗರದ ಭಾವನೆಗಳ ಅಭಿವ್ಯಕ್ತಿಗಾಗಿ ಅಕ್ಷರರೂಪ ಕೊಡುತ್ತಿದ್ದಂತೆ ಅದು ಕ್ರಿಯಾತ್ಮಕವಾಗಿ ಮೈದಾಳಿದ್ದು ಮಾತ್ರ ಅನಿರೀಕ್ಷಿತ ಎಂದು ಹೇಳುತ್ತಾ ಅಮೆರಿಕಕ್ಕೆ ಭೇಟಿ ಕೊಡುವ ಮುನ್ನ ನಾವು ಒಟ್ಟಾಗಿ ಸಿಂಗಾಪುರ ಮತ್ತು ಮಲೇಶಿಯಾ ದೇಶಕ್ಕೆ ಪ್ರಯಾಣಿಸಿದ್ದೆವು ಆ ಸುಂದರ ಅನುಭವಗಳನ್ನು ಈ ಚಿಕ್ಕ ಹೊತ್ತಿಗೆಯಲ್ಲಿ ಬಹಳ ಚೆನ್ನಾಗಿ ಸೆರೆಹಿಡಿದು ವರ್ಣ ಚಿತ್ರಗಳ ಮೂಲಕ ಕೆಲವು ಟಿಪ್ಪಣಿಗಳ ಬರಹದಲ್ಲಿ ಪ್ರವಾಸಿಗ ದೇಸಾಯಿ ಅವರು ಇಲ್ಲಿ ಬರೆದಿರುವುದು ಓದಿಸಿಕೊಂಡು ಹೋಗುವಷ್ಟು ಕೃತಿ ಸಮೃದ್ಧವಾಗಿದೆ ಈ ಕೃತಿಯನ್ನು ಹೊರ ತರಲು ಯಶಸ್ ಹಿರೇಮಠ ಹಾಗೂ ಮಹಾನಂದ ದಿಗ್ಗಾವ್ ಕರ್ ಅವರನ್ನು ತುಂಬು ಮನದಿಂದ ಧನ್ಯತಾ ಭಾವದಲ್ಲಿ ನೆನಪಿಸಿಕೊಂಡಿದ್ದು ಅವರ ಹಿರಿಮೆಗೆ ಸಾಕ್ಷಿಯಾಗಿದೆ.
 ಈ ಕಿರು ಗ್ರಾಮಕ್ಕೆ ಬಂದ ತೆರೆಯುತ್ತಿದ್ದಂತೆ ಅವರ ಪ್ರವಾಸ ಮುನ್ನ ದಿನ ಪೂರ್ವ ಸಿದ್ಧತೆ ಮತ್ತು ಪಯಣಗಳ ಅನುಭವಗಳು ಪ್ರವಾಸದ ಕನಸು ಕಲ್ಬುರ್ಗಿಯಿಂದ ಅಮೆರಿಕದ ಕಡೆಗೆ ಎಂದು ಆರಂಭವಾಗುವ ಬರಹದಲ್ಲಿ ಹೈದರಾಬಾದಿನ ವಿಮಾನ ನಿಲ್ದಾಣದಲ್ಲಿ ಭಾವನಾತ್ಮಕ ಬಿಳ್ಕೊಡುಗೆ ಮೇ 25 2025ರ ಬೆಳಿಗ್ಗೆ ಎಂಟು ಗಂಟೆಗೆ ಕಲ್ಬುರ್ಗಿಯಿಂದ ಕಾರಿನಲ್ಲಿ ಹೊರಟು ಮಾರ್ಗದುದ್ದಕ್ಕೂ ಪ್ರಯಾಣದ ಮಾತುಗಳನ್ನೇ ಆಡುತ್ತ ಸಾಗಿದರು ಭಾರತದ ಮಣ್ಣಿನ ಸುವಾಸನೆಯನ್ನು ಹೆಸರಾಗಿಸುತ್ತಿದ್ದವು ಸಂಜೆ ವೇಳೆಗೆ ಹೈದರಾಬಾದ್ ವಿಮಾನ ನಿಲ್ದಾಣ ತಲುಪಿದೆವು ದೀಪಕ್ ಮತ್ತು ಸುಶ್ಮಿತಾ ಅಲ್ಲಿ ನಮಗಾಗಿ ಕಾಯುತ್ತಿದ್ದರು ಎಂದು ಹೇಳುವಾಗಿನ ಅವರ ಮಾತುಗಳ ಭಾವನಾತ್ಮಕ ಸಂಚಲನ ಓದುಗನ ಮನಸ್ಸಿನ ಮೇಲೆ ತೀವ್ರ ಕುತೂಹಲ ಮೂಡಿಸುವ ವಿಷಯವಾಗಿ ಕಾಡುತ್ತದೆ.
 ಅಲ್ಲಿ ಪ್ರಯಾಣಿಸುವ ದಂಪತಿಗಳು ಭಾವನಾತ್ಮಕವಾಗಿ ಬಿಳ್ಕೊಡುವ ಆ ಕ್ಷಣಗಳ ಕುರಿತು ಭಾವನಾತ್ಮಕವಾಗಿ ಆಡುವ ಮಾತುಗಳು ನೆನೆಸಿಕೊಳ್ಳುವ ಮಧುರ ಕ್ಷಣಗಳು ಅದನ್ನು ಓದುತ್ತಾ ಅನುಭವಿಸುವ ಓದುಗನಿಗೆ ಬಹಳಷ್ಟು ಖುಷಿ ಮತ್ತು ಹೆಮ್ಮೆ ಎನಿಸುತ್ತದೆ.
 ಮನದಲ್ಲಿ ಈ ಪ್ರಯಾಣ ಸುಖಕರವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡು ಆಕಾಶದ ದಾರಿ ಎಮಿನೇಟರ್ ಮೂಲಕ ವಿಶ್ವ ಪಯಣ ಆರಂಭವಾಗಿ ಮೊದಲ ಬಾರಿಗೆ ವಿಮಾನದೊಳಗೆ ಕಾಲಿಟ್ಟ ಆ ಕ್ಷಣ ಇಂದಿಗೂ ಹಚ್ಚು ಹಚ್ರಾಗಿದೆ ಇಟಗಿಯ ಪಕ್ಕದಲ್ಲಿ ಕುಳಿತ ವಿಜಯಲಕ್ಷ್ಮಿ ಅವರ ಮುಗ್ಧ ನಗುವಿನೊಂದಿಗೆ ಕೇಳಿದ ಆ ಮಾತು ಇದೆಲ್ಲ ನಿಜವಾಗಿಯೂ ನಡೆಯುತ್ತದೆಯೇ ಎಂದು ಅರಬಿ ಮತ್ತು ಇಂಗ್ಲಿಷ್ ಭಾಷೆಗಳ ಘೋಷಣೆಗಳು ವಿಮಾನ ಸಿಬ್ಬಂದಿಯ ಸೌಜನ್ಯಯುತನವು ಒಂದು ಹೊಸ ಲೋಕದ ಬಾಗಿಲು ತೆರೆದಂತೆ ಕಾಣಿಸ್ತು ವಿಮಾನ ಗಗನಕ್ಕೆ ಚಿಮ್ಮಿದಾಗ ಕೆಳಗಿನ ನಗರದ ಬೆಳಕುಗಳು ಮಾಯವಾಗಿ ಆಕಾಶದ ಕತ್ತಲಲ್ಲಿ ನಕ್ಷತ್ರಗಳು ನಮ್ಮ ಕನಸುಗಳಂತೆ ಮಿಂಚತೊಡಗಿದ್ದು ಒಂದು ಸೋಜಿಗದ ಸಂಗತಿಯಾಗಿತ್ತು ಈ ಜೋಡಿಗೆ.
 ಇಲ್ಲಿಯ ಸಲಾಡ್ ಮತ್ತು ಹಣ್ಣುಗಳ ಸವಿ ರುಚಿಯಲ್ಲಿ ವಿದೇಶದ ನಡುವೆಯೂ ಭಾರತ ಅಡುಗೆಯ ಪರಿಮಳವಿತ್ತು ಎಂಬ ಮಾತಿನಲ್ಲಿ ಸತ್ಯಂ ಶವಿದೆ ಎಂದು ತಿಳಿಯುತ್ತದೆ ದುಬೈಯಲ್ಲಿ ವಿಮಾನ ಬದಲಿಸುವ ವೇಳೆ ಕಂಡ ಆ ಬೃಹತ್ ಹಾಲುಗಳು ಚಿನ್ನದ ಮಳಿಗೆಗಳು ಮತ್ತು ಬಗೆ ಬಗೆಯ ಜನರು ಇಡೀ ವಿಶ್ವವೇ ಒಂದು ಕುಟುಂಬವೆಂಬ ಭಾವನೆಯನ್ನು ಮೂಡಿಸುತ್ತಿದ್ದವು ಎಂದು ಲೇಖಕರು ಹೇಳುವ ಧ್ವನಿಯಲ್ಲಿ ನಾವು ಧನ್ಯವಾದ ಾಗಿದೆ.
 ಅಮೆರಿಕದ ನೆಲದ ಮೇಲೆ ಮೊದಲ ಹೆಜ್ಜೆಯನ್ನು ಇರಿಸಿದಾಗ ದೀರ್ಘ ಪ್ರಯಾಣದ ನಂತರ ಡಲ್ಲಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಾವು ಪ್ರಯಾಣಿಸಿದ ವಿಮಾನ ಬಂದು ಇಳಿದಾಗ ಕಿಟಕಿಯಾಚೆ ಕಂಡ ಅಮೆರಿಕ ಬಲುಮೋಹಕವಾಗಿತ್ತು ವಿವಶಿತ ರಸ್ತೆಗಳು ಹಸಿರು ತೋಟಗಳು ಮತ್ತು ಬಿಳಿ ಮನೆಗಳು ಕಣ್ಣಿಗೆ ತಂಪು ನೀಡಿದವು . ಹೊರಬಂದೊಡನೆ ಚೇತನ ಮತ್ತು ಸೊಸೆ ಸೌಂದರ್ಯ ಹೂಗುಚ್ಛ ನೀಡಿ ಹರ್ಷದ ನಗುವಿನೊಂದಿಗೆ ಸ್ವಾಗತಿಸಿದ ಆ ಗಳಿಗೆಯನ್ನು ಮರೆಯಲು ಆದಿತೆ ಎನ್ನುವ ಲೇಖಕರ ಮಾತು ದೃಶ್ಯದ ಮೂಲಕ ಕಣ್ಣಿಗೆ ಅಪ್ಪಳಿಸುತ್ತ ನಮ್ಮನ್ನು ಸಹ ಮೋಹ ಗೊಳಿಸಿತ್ತು.
 ಬಾಗಿಲೊಳಗೆ ಕಾಲಿಡಿಸಿ ಮಗ ಮತ್ತು ಸೊಸೆಯ ನಗುಮುಖದ ಮಧುರ ಧ್ವನಿಯಾ ವೆಲ್ಕಮ್ ಅಮ್ಮ ವೆಲ್ಕಮ್ ಪಪ್ಪ ಎಂಬ ಭಾವಪೂರ್ಣ ಧ್ವನಿ ಕೇಳಿದಾಗ ಪ್ರಯಾಣ ಮಾಡಿದ ನಮ್ಮೆಲ್ಲ ಆಯಾಸ ಕಣ್ಮರೆಯಾಗಿದ್ದು ನಿಜಕ್ಕೂ ಸತ್ಯ ಎನ್ನುವಾಗಿನ ಅವರ ಮಾತು ತೂಕಬದ್ದವಾಗಿತ್ತು ಆಗ ನಾನು ಮಗ ಚೇತನನ ಭುಜ ತಟ್ಟಿ ಇದು ದೇವರು ಕೃಪೆ ಮಗ ಎಂಬ ದೈವದ ಭಾವನೆಯನ್ನು ಹೊರ ಸೂಚಿಸಿದಾಗ ಅಷ್ಟೇ ವಿನಮ್ರನಾಗಿ ಮಗ ಆ ಮಾತನ್ನು ಒಪ್ಪಿಕೊಂಡ ಎಂದು ಹೇಳುವ ಗಿನ ಅವರ ಖುಷಿ ಭಾವನೆಯ ಧ್ವನಿ ಓದುಗರ ಮನಸ್ಸನ್ನು ತಟ್ಟದೇ ಇರದು.
 ಅಮೆರಿಕಾದ ಜೀವನ ಶೈಲಿ ಮತ್ತು ನಯಾಘಾರ ಅನುಭವಗಳ ಹೊಸ ಲೋಕದ ದಿನಚರಿ ಅಲ್ಲಿನ ಶಿಸ್ತಿನ ಪಾಠ ಹೇಳುತ್ತಾ ಹೋಗಿರುವ ಪ್ರಯಾಣಿಕ ದೇಸಾಯಿ ಕುಟುಂಬ ಅವರು ಆದೇಶದ ನೆಲ ಜಲ ಸಂಸ್ಕೃತಿ ಸಂಸ್ಕಾರವನ್ನು ಬಹಳ ಶಿಸ್ತುಭದ್ಧವಾಗಿ ಈ ಗ್ರಂಥದಲ್ಲಿ ದಾಖಲಿಸಿದ್ದಾರೆ.
 ಅಮೆರಿಕದ ಮಗನ ಮನೆಯಲ್ಲಿಯ ಸಮಯ ಪಾಲನೆ ಶಿಸ್ತು ಬದ್ಧ ಜೀವನ ದೇಸಾಯಿ ಅವರಿಗೆ ಖುಷಿ ತಂದಿತ್ತು ಜನ ಸೇರಿ ಆರಂಭವಾಗುತ್ತಿದ್ದಂತೆ ಸೊಸೆ ಸೌಂದರ್ಯ ತಯಾರಿಸುವ ಘಮಘಮಿಸುವ ಕಾಫಿ ವ್ಯಾಯಾಮ ಮುಗಿಸಿ ಕಚೇರಿ ಕೆಲಸಕ್ಕೆ ಸಿದ್ಧನಾಗುವ ಮಗ ಚೇತನ ಇವೆಲ್ಲದರ ನಡುವೆ ಸಮಯ ಪಾಲನೆ ಮತ್ತು ಬದುಕಿನ ಸಮತೋಲನ ಎದ್ದು ಕಾಣಿಸುತ್ತಿತ್ತು ಎಂದು ಸೂಕ್ಷ್ಮ ಮನಸ್ಸಿನಿಂದ ನೋಡುತ್ತಾ ಮನೆಯ ಕಿಟಕಿಯಿಂದ ಹಸಿರು ಹೂ ಮರಗಳನ್ನು ನೋಡುತ್ತಿದ್ದ ಹೆಂಡತಿ ಹೇಳಿದ ತೂಕ ಬದ್ದ ಮಾತನ್ನು ದೇಸಾಯಿಯವರು ಇಲ್ಲಿ ದಾಖಲಿಸಿದ್ದಾರೆ ಅದೇನೆಂದರೆ, ಹೆಂಡತಿ ಧ್ವನಿಯ ಮಧುರತೆಯನ್ನು ಹಿಂಬಾಲಿಸುತ್ತ, ಇಲ್ಲಿನ ಮನೆಗಳಲ್ಲಿ ತೋಟವೇ ಅವುಗಳ ಆತ್ಮ ವಿದ್ದಂತೆ ಎನ್ನುವಾಗಿನ ಮಾತು ಸತ್ಯೇತೆಯಿಂದ ಕುಡಿತ್ತು.
 ಅಲ್ಲಿಯ ಊಟದ ಅದರಲ್ಲೂ ಸಂಜೆ ಊಟದ ಬಗ್ಗೆ ಹೀಗೆ ವಿವರಿಸುತ್ತಾರೆ, ಸಂಜೆ ಎಲ್ಲರೂ ಒಟ್ಟಾಗಿ ಕುಳಿತು ಊಟ ಮಾಡುವುದು ಅವರ ಮನೆಯ ಹಳಿಕಿತ ನಿಯಮ ಊಟದ ಮೇಜಿನ ಮೇಲೆ ಮೊಬೈಲ್ ಫೋನ್ಗಳಿಗೆ ಪ್ರವೇಶವಿಲ್ಲ ಈ ಪುಟ್ಟ ಶಿಸ್ತಿನಲ್ಲೇ ಕುಟುಂಬದ ನಿಜವಾದ ಒಗ್ಗಟ್ಟಿದೆ ಎಂಬುದು ಮನವರಿಕೆಯಾಯಿತು ಎನ್ನುವಾಗಿಲ್ಲ ದೇಸಾಯಿ ದಂಪತಿಗಳ ಮಾತು ಆ ಚಿತ್ರಣ ಓದುಗುನಾದ ನನಗೆ ಕಣ್ಮುಂದೆ ಬಂದು ನಿಲ್ಲದೆ ಇರಲಿಲ್ಲ.
 ಇದೇ ರೀತಿ ಅವರು ಭಾರತೀಯ ಸಂಗಮ ಮತ್ತು ಮಾನವೀಯತೆಯ ನೆನಪು ವಿಶ್ವವಿದ್ಯಾಲಯದ ನೆಲದಲ್ಲಿ ಜ್ಞಾನದ ದರ್ಶನ ನಯಾಘಾತ ಜಲಪಾತ ಪ್ರಕೃತಿಯ ಮಹಾ ಗಂಗಾ ರತಿ ಅಮೆರಿಕ ಮತ್ತು ಭಾರತ ಸಂಸ್ಕೃತಿ ಸಮ್ಮಿಲನ ವೈಟ್ ಹೌಸ್ ಅಧಿಕಾರದ ಶ್ವೇತ ಸಂಕೇತ ಲಿಂಕನ್ ಸ್ಮಾರಕ ಮೌನದ ಮಹತ್ವ ವಾಷಿಂಗ್ಟನ್ ಸ್ಮಾರಕ ಮತ್ತು ಭಾವೈಕ್ಯತೆಯ ಹನಿ ಸ್ಮಿತೋನಿಯನ್ ಮ್ಯೂಸಿಯಂ ವಿಯಟ್ನಮ್ ಯುದ್ಧದ ಸ್ಮಾರಕ ಶಾಂತಿಯ ಪಾಠ ವಾಷಿಂಗ್ಟನ್ ಸಂಜೆ ಮತ್ತು ಕೃತಜ್ಞತೆ ಭಾವಗೀತೆ ಆಕಾಶ ಮಾರ್ಗದ ಮಧುರ ಕ್ಷಣಗಳು ನ್ಯೂಯಾರ್ಕ್ ಅಮೆರಿಕದ ಹೃದಯದ ಬಡಿತ ನ್ಯೂ ಜರ್ಸಿ ಮತ್ತು ಅಟ್ಲಾಂಟಿಕ್ ಸಮುದ್ರ ಪ್ರಕೃತಿಯ ಶಾಂತಿ ಕೂಲರ್ ಪಾರ್ಕ್ ಮತ್ತು ವಾಟರ್ ಗಿಡಗಳು ವಾಲ್ ಮಾರ್ಟ್ ಅಸೋಸಿಯೇಟ್ಸ್ ಇವೆಂಟ್ಸ್ ಸಂಭ್ರಮದ ಮೇಳ ಹಾಲಿವುಡ್ ಕಲಾವಿದರ ಕಲಾ ವೈಭವ ಒಟ್ಟಾರೆ ಈ ಎಲ್ಲಾ ಪಯಣದ ಸಾರಾಂಶವನ್ನು ಚಿಕ್ಕ ಚಿಕ್ಕ ಪ್ಯಾರಗಳಲ್ಲಿ ಹೇಳುತ್ತಾ ಮುಂದೆ ಅವರು ಶಿಕೇಗೋ ವಿವೇಕಾನಂದರು ನಡೆದಾಡಿದ ಪವಿತ್ರ ನೆಲದ ಮೇಲೆ ಚೈತ್ರ ಯಾತ್ರೆಯನ್ನು ಹಮ್ಮಿಕೊಂಡದ ಅನುಭವಗಳನ್ನು ಹೇಳುತ್ತಾ ಕೇವಲ ಪ್ರವಾಸವನ್ನ ಇದೊಂದು ಭಾವ ಯಾತ್ರೆ ಅಲ್ಲಿಯೂ ಸಹ ಆರ್ಟ್ ಇನ್ಸ್ಟಿಟ್ಯೂಟ್ ಆಫ್ ಸಿಕ್ಯಾಗೋ ಭಾರತದ ಆತ್ಮದ ದರ್ಶನ ಮಿಜಗನ್ ಸರೋವರದ ತೀರದಲ್ಲಿ ಮೌನದ ಕ್ಷಣಗಳು ಹಾಗೆ ಮುಂದೆ ಸಾಗುತ್ತಾ ನ್ಯೂ ಜರ್ಸಿ ಮತ್ತು ಬಿ ಎ ಪಿ ಎಸ್ ಸ್ವಾಮಿನಾರಾಯಣ ಅಕ್ಷರಧಾಮ ಅಲ್ಲಿ ಅನ್ ನೆಮ್ಮದಿಯ ಅಂಗಳದ ಅನಾವರಣದ ಕುರಿತು ವಿವರಿಸಿದ ದಾಟಿ ಮೆಚ್ಚುವಂತದ್ದು.
 ಕಿರುಹತ್ತಿಗೆಯ ಕೊನೆಯಲ್ಲಿ ಮರಳಿ ಮನೆ ಅತ್ತ ಥಾಯ್ನಾಡಿನ ಸೆಳೆತ ಮಾತು ಭಾವನಾತ್ಮಕ ವಿದಾಯ ಕುರಿತು ಅಂತರಾತ್ಮದ ಮಾತುಗಳನ್ನು ಆಡಿರುವ ಲೇಖಕರು ಸೂಕ್ಷ್ಮ ಮನಸ್ಸುಗಳಿಂದ ವಿದೇಶಿ ನೆಲೆಗಳ ಭಾವನಾತೀರದ ಅಲೆಗಳನ್ನು ತಡೆದುಕೊಂಡು ತಾಯ್ನಾಡಿನ ನೆಲದಲ್ಲಿ ಕಾಲಿರಿಸಿದ ಕ್ಷಣಗಳು ಮರು ಹುಟ್ಟಿನಂತೆ ಅವರಿಗೆ ವಾಸವಾಗಿದ್ದು ನಿಜಕ್ಕೂ ಬರಹ ಕುತೂಹಲ ಮತ್ತು ಚೇತುಹಾರಿಯಾಗಿ ಕಾಣಿಸಿದ್ದು ಮನಸ್ಸಿನ ಮೇಲೆ ಅಗಾಧ ಪರಿಮಳ ಬೀರುವ ಈ ಕಿರುಹೊತ್ತಿಗೆ ನಿಜಕ್ಕೂ ಒಂದು ಅದ್ಭುತ ಗ್ರಂಥ ಇಂತಹ ಅಪರೂಪದ ಮತ್ತು ಸಾಹಸಕ್ಕೆ ಕೈ ಹಾಕಿ ನಾಡಿನ ಓದುಗರ ಕೈಗೆ ಈ ಪುಸ್ತಕವನ್ನ ಇರಿಸುವ ಕನಸನ್ನ ಪೂರೈಸಿಕೊಂಡ ಎಸ್ ಎಸ್ ಹಿರೇಮಠ ಹಾಗೂ ಮಹಾನಂದ ದಿಗ್ಗಾವ್ಕರ್ ಅವರ ಕೆಲಸಕ್ಕೆ ದೊಡ್ಡದೊಂದು ಸಲಾಂ ಹೇಳುತ್ತಾ ಕನ್ನಡ ಓದುಗರು ಈ ಪುಸ್ತಕವನ್ನು ಓದಿ ಅಲ್ಲಿಯ ಮಧುರ ಕ್ಷಣಗಳಿಗೆ ಸಾಕ್ಷಿ ಆಗಬೇಕು.

-ಕಿರಣ್ ಪಾಟೀಲ್ ಕಲಬುರಗಿ

Author
SatyaKam
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST