ವರದಿ: ಕುದಾನ್ ಸಾಬ್
ಸತ್ಯಕಾಮ ವಾರ್ತೆ ಯಾದಗಿರಿ:
ಮಕ್ಕಳು ಯಾವುದೇ ಸಮಸ್ಯೆ ಇಲ್ಲದೆ ಶಾಲೆಯನ್ನು ತಲುಪುತ್ತಾರೆ ಎಂದು ಶಾಲಾ ಬಸ್ ನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತಾರೆ, ಆದರೆ ಪೋಷಕರಿಗೆ ವಾಹನದಲ್ಲಿ ಓಡಾಡುವ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಮೂಡಿಸುವ ವಾತಾವರಣ ಜಿಲ್ಲೆಯಲ್ಲಿ ಸೃಷ್ಟಿಯಾಗಿದ್ದೂ ಅನೇಕ ಖಾಸಗಿ ಶಾಲೆಯ ವಾಹನಗಳು ಸರಿಯಾದ ದಾಖಲೆ ಪತ್ರಗಳು ಇಲ್ಲದೇ ಇರುವುದು ಬಹಿರಂಗವಾಗಿದೆ.
- Advertisement -
ಹೌದು ನೂರಾರು ಕನಸುಗಳನ್ನು ಹೊತ್ತು ಶಿಕ್ಷಣ ಪಡೆಯಲು ಗ್ರಾಮೀಣ ಪ್ರದೇಶದ ಅನೇಕ ಮಕ್ಕಳನ್ನು ಪಾಲಕರು ಶಾಲಾ ವಾಹನಗಳಲ್ಲಿ ಕಳುಹಿಸುತ್ತಾರೆ, ಆದರೆ ಅದೆಷ್ಟೂ ವಾಹನಗಳು ಸುರಕ್ಷಿತವಾಗಿದೆ ಎಂದು ಪ್ರಜ್ಣಾನವಂತ ಪಾಲಕರು ಮಣನೆ ಮಾಡಿಕೋಳ್ಳುವಂತಾಗಿದೆ, ಇದಕ್ಕೆ ಪುಷ್ಠಿಕರಿಸುವಂತೆ ಇತ್ತಿಚಿಗೆ ಮಾನ್ವಿಯಲ್ಲಿ ಶಾಲಾ ಬಸ್ ಅಪಘಾತವಾಗಿ ಹತ್ತಾರು ವಿದ್ಯಾರ್ಥಿಗಳು, ತಮ್ಮ ಚಿಕ್ಕ ವಯಸ್ಸಿನಲ್ಲೇ ವಿಕಲ ಚೇತನರಾದರೇ, ಇನ್ನೂ ಕೆಲವು ಮಕ್ಕಳು ಉಸಿರು ಚೆಲ್ಲಿದರು.
ಇಂಗ್ಲಿಷ್ ವ್ಯಾಮೋಹದಿಂದಾಗಿ ಇಂದು ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆ ಬದಲಿಗೆ ಖಾಸಗಿ ಶಾಲೆಗಳು ಅದೆಷ್ಟೇ ದೂರದಲ್ಲಿದ್ದರೂ ಅದಕ್ಕೆ ದಾಖಲಿಸುತ್ತಾರೆ. ಇದಕ್ಕೆ ಮುಖ್ಯವಾಗಿ ಮಕ್ಕಳ ಸಂಚಾರಕ್ಕಾಗಿ ವಸತಿ ನಿಲಯದ ಪರ್ಯಾಯವಾಗಿ ಶಾಲಾ ಬಸ್ಗಳಿಗೆ ಪಾಲಕರು ಮೊರೆಹೋಗುತ್ತಾರೆ, ಆದರೆ ಜಿಲ್ಲೆಯಲ್ಲಿನ ಬಹುತೇಕ ಖಾಸಗಿ ಶಾಲೆಯ ವಾಹನಗಳು ಒಂದಿಲ್ಲೋಂದಾದ ಇನ್ಸೂರೆನ್ಸ್, ರಸ್ತೆ ತೆರಿಗೆ, ಪಿಟೆನೆಸ್ ಸೇರಿದಂತೆ ಹಲವು ಧಾಖಲೆಗಳನ್ನು ಖಾಸಗಿ ಶಾಲೆಯ ಆಡಳಿತ ಸಂಸ್ಥೆಗಳು ಪಾಲಿಸುತ್ತಿಲ್ಲ, ಇದ್ದರಿಂದ ಪಾಲಕರು ತಮ್ಮ ಮಕ್ಕಳ ಜೀವ ಭಯದಲ್ಲಿ ಶಾಲೆಗಳಿಗೆ ಕಳುಹಿಸುವಂತ ದಿನಗಳು ಇವೆ.
ಅದರಲ್ಲೂ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಮಕ್ಕಳ ಪೋಷಕರಿಂದ ವಸೂಲಿ ಮಾಡುವ ಶುಲ್ಕದ ಕುರಿತಷ್ಟೇ ಆಸಕ್ತಿಯಿದೆ.ಆದರೆ ಅವರನ್ನೆ ನಂಬಿ ಪೋಷಕರು ಕಳಿಸುವ ಮಕ್ಕಳ ಬಗ್ಗೆ ಶಾಲೆ ಸಂಸ್ಥೆಗಳು ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ, ಇದು ಬಹುತೇಕ ಖಾಸಗಿ ಶಾಲೆಗಳ ವಾಸ್ತವ ಇದೇ ರೀತಿ ಇವೆ. ಪ್ರತಿನಿತ್ಯ ಮುಂಜಾನೆ ಮಕ್ಕಳು ಶಾಲೆಯ ವಾಹನ ಹತ್ತಿದ ಬಳಿಕ ಮರಳಿ ಮನೆ ಸೇರಿಸುವವರೆಗೆ ಮಗುವಿನ ಸುರಕ್ಷತೆ ಹೊಣೆ ತಮ್ಮದು ಎಂಬ ಪ್ರಜ್ಞೆಯೇ ಶಾಲೆಗಳ ಆಡಳಿತ ಮಂಡಳಿಗಳಿಗೆ ಇಲ್ಲದಿರುವುದು ದುರಂತ.
- Advertisement -
ವಿದ್ಯಾರ್ಥಿಗಳು ಸಂಚರಿಸುವ ಶಾಲಾ ವಾಹನಗಳ ಸುರಕ್ಷತೆ ಬಗ್ಗೆ ಸುಪ್ರೀಂ ಕೋರ್ಟ್, ವಿವರವಾದ ಮಾರ್ಗದರ್ಶಿ ಸೂತ್ರ ರಚಿಸಿದೆ. ಆದರೆ, ಬಹುತೇಕ ಶಾಲೆಗಳಲ್ಲಿ ಇವುಗಳಲ್ಲಿ ಯಾವುದೇ ಒಂದೂ ಪಾಲನೆಯಾಗುತ್ತಿಲ್ಲ. ಶಾಲಾ ವಾಹನಗಳಲ್ಲಿನ ಸುರಕ್ಷತಾ ನಿಯಮಗಳ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕಾದ ಸಾರಿಗೆ ಇಲಾಖೆ ಅಧಿಕಾರಿಗಳು ದಿವ್ಯ ಮೌನ ವಹಿಸಿರುವುದು ಹಲವು ಸಂಶಯಗಳನ್ನು ಹುಟ್ಟು ಹಾಕಿರುವುದಂತೂ ಸುಳ್ಳಲ್ಲ.
ಒಟ್ಟಿನಲ್ಲಿ ಮಸ್ಕಿಯಲ್ಲಾದ ಶಾಲಾ ವಾಹನದ ದುರ್ಘಟನೆ ಯಾದಗಿರಿಯಲ್ಲಿ ಸಂಭವಿಸದಂತೆ ಇಲ್ಲಿನ ಸಾರಿಗೆ ಇಲಾಖೆ ಅಧಿಕಾರಿಗಳು ಈಗಲಾದರೂ ಇಂತಹ ಸರಿಯಾದ ದಾಖಲೆಇರದ ಶಾಲಾವಾಹನಗಳನ್ನು ಯಾವುದೇ ಮುಲ್ಲಾಜಿಲ್ಲದೇ ವಶಪಡಿಸಿಕೋಂಡು ಮುಂದಾಗುವ ಅನಾಹುತವನ್ನು ತಪ್ಪಿಸಬೇಕು,ಇಲ್ಲದಿದ್ದರೇ ಆರ್.ಟಿ.ಒ ಅಧಿಕಾರಿಗಳ ಬೇಜವಬ್ದಾರಿತನಕ್ಕೆ ಅಪಾಘತಗಳಿಗೆ ತಾವೇ ಹೋಣೆಯಾಗಬೇಕಾತ್ತದೆ, ಇದಕ್ಕೆ ಶಾಲಾ ಆಡಳಿತಮಂಡಳಿಯು ಜವಬ್ದಾರಿಯಾಗುತ್ತದೆ.
- Advertisement -
ನಮ್ಮ ಮಕ್ಕಳನ್ನು ಖಾಸಗಿ ಶಾಲೆ ದಾಖಲಾತಿ ಮಾಡಿದ್ದೂ, ಆದರೆ ಶಾಲಾ ಸಂಸ್ಥೆಗಳು ಶಾಲಾ ವಾಹನಗಳನ್ನು ಯಾವುದೇ ದಾಖಲೆ ಪತ್ರಗಳಿಲ್ಲದೇ ಓಡಿಸುತ್ತಾರೆ, ಹೀಗಾಗಿ ನಾವು ನಮ್ಮ ಮಕ್ಕಳು ಸಂಜೆ ಮನೆ ಸೇರುವವರೆಗೆ ಜೀವ ಕೈಯಲ್ಲಿ ಹಿಡಿದುಕೊಂಡು ಕಾಯುವಂತಾಗಿದೆ. ಯಾವುದೇ ಅನಾಹುತಗಳು ಸಂಭವಿಸಿದರೆ ಇದಕ್ಕೆ ಯಾರು ಹೋಣೆಯಾಗುತ್ತಾರೆ,
-ಹೆಸರೇಳಲಿಚ್ಚಿಸದ ಪಾಲಕರು

