ಸತ್ಯಕಾಮ ವಾರ್ತೆ ಗುರುಮಠಕಲ್ :
ಪಟ್ಟಣವು ತಾಲೂಕ ಕೇಂದ್ರವಾಗಿ ಆರು ವರ್ಷ ಕಳೆದರೂ ತಾಲೂಕಿಗೆ ಸಂಬಂಧ ಪಟ್ಟ ಇಲಾಖೆಗಳು ಸೇರಿದಂತೆ ತಾಲೂಕು ನ್ಯಾಯಾಲಯ ಸ್ಥಾಪನೆ ಆಗದೆ ಇರುವದಕ್ಕೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ. ಎಸ್. ಮಾಲಿಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಿಟ್ ಹೌಸ್‌ನಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಗುರುಮಠಕಲ್‌ನಲ್ಲಿ ತಾಲೂಕು ನ್ಯಾಯ ಲಯ ಸ್ಥಾಪನೆಗೆ ಆಗ್ರಹಿಸಿ ಹೋರಾಟದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಡಿಸೆಂಬರ್ 23 ರಂದು ಗಾಂಧಿ ಮೈದಾನದಿಂದ ಬಸವೇಶ್ವರ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.
- Advertisement -
ಪಕ್ಷ ಬೇಧ ಮರೆತು ಇಂದು ಗಡಿಭಾಗದ ತಾಲೂಕಿನ ಮೂಲಭೂತ ಸೌಕರ್ಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳು, ಸರ್ವ ಸಂಘ ಸಂಸ್ಥೆಗಳು ಹೋರಾಟಕ್ಕೆ ಹೊಂದಾಗಬೇಕು ಎಂದು ವೀರಪ್ಪ ಪ್ಯಾಟಿ ಅಭಿಪ್ರಾಯಪಟ್ಟರು.
ವಕೀಲ ಗುರುನಾಥ ಅನಪುರ ಮಾತನಾಡಿ, ಹೈಕೋರ್ಟ್ ಈಗಾಗಲೇ ಸ್ಪಷ್ಟವಾಗಿ ನಿರ್ದೇಶಿಸಿದ್ದರು ಫಿಠೋಪಕರಣದ ಸಿದ್ಧತೆಗಾಗಿ ಬಿಡುಗಡೆಯಾಗಬೇಕಾದ ಹಣವನ್ನು ವಿವಿಧ ಇಲಾಖೆ ಹಾಗೂ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದಾಗಿ ಬಾರದಿರಿವಿದು ಮಲತಾಯಿ ದೋರಣೆ ಮಾಡುತ್ತಿದ್ದಂತೆ ಕಾಣುತ್ತಿದೆ, ನ್ಯಾಯ ದೊರಕುವ ವರೆಗೂ ಹೋರಾಟ ನಿಲ್ಲದು ಎಂದು ಅವರು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಚಾಪೆಟ್ಲಾ ಮಾತನಾಡಿ, ಪ್ರಿಯಾಂಕ ಖರ್ಗೆ ಅವರು ಸಂಬಂಧ ಪಟ್ಟ ಇಲಾಖೆಗೆ ಫಿಠೋಪಕರಣಕ್ಕೆ ಅವಶ್ಯಕತೆಯ ಹಣವನ್ನು ಶಿಫಾರಸ್ಸು ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರ ನೇತೃತ್ವದಲ್ಲಿ ಒತ್ತಡ ಹೇರೋಣ ಎಂದರು.
- Advertisement -
ಜೆಡಿಎಸ್ ನ ಮುಖಂಡ ಜಿ. ತಮ್ಮಣ್ಣ, ವಕೀಲ ಸಾಯಬಣ್ಣ ಗಣಾಪುರ, ಅನಂತಪ್ಪ ಯಾದ್ಲಾಪುರ ಮಾತನಾಡಿದರು.
ಪ್ರತಿಭಟನೆಗೆ ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಬೆಂಬಲ ನೀಡಿ ಸಭೆಯಲ್ಲಿ ಭಾಗವಹಿಸಿದ್ದರು. ಅವರು ಇಲ್ಲಿನ ಜನರು ತಾಲ್ಲೂಕು ಕೇಂದ್ರವಾದರೂ ಜಿಲ್ಲಾ ಕೇಂದ್ರಕ್ಕೆ ಅಲೆದಾಡುವುದು ತಪ್ಪುತ್ತಿಲ್ಲ. ಇಲ್ಲಿಯೇ ನ್ಯಾಯಾಲಯವಾದಲ್ಲಿ ಜನರ ಸಮಸ್ಯೆಗೆ ಇಲ್ಲಿಯೇ ಪತಿಹಾರ ಸಿಗುವುದು ಅನುಕೂಲವಾಅಗುವುದು ಎಂದು ಹೇಳಿದರು. ಈ ಸಂಧರ್ಭದಲ್ಲಿ ರಾಜ ರಮೇಶ ಗೌಡ, ಖಜಾಂಚಿ ಸಾಬಣ್ಣ, ಕಿಷ್ಟಪ್ಪ ಪುರುಷೋತ್ತಮ್, ಕೃಷ್ಣ ಮೇದಾ, ಗುರುನಾಥ ರೆಡ್ಡಿ ಅನಪುರ, ವೀರಪ್ಪ ಪ್ಯಾಟಿ, ವಿಶ್ವನಾಥ ರೆಡ್ಡಿ, ಜಿ.ತಮ್ಮಣ್ಣ, ಕೃಷ್ಣ, ಸಂಜೀವ ಕುಮಾರ ಚಂದಾಪುರ, ನರಸಿಂಹಲು ನಿರೇಟಿ, ಆಶಣ್ಣ ಬುದ್ದ, ಮೋಹನ ಕುಮಾರ್ ಗಜಾರೆ, ಕೃಷ್ಣ ಪಂಚಾಲ, ಅನಂತಪ್ಪ ಬೋಯಿನ್ ಯಾದ್ಲಾಪುರ, ಆಶೋಕ್ ಗುಮಡಾಲ್, ನಾಗೇಶ ಗದ್ದಿಗಿ, ಮರಳಿಧರ್ ಮೌರ್ಯ, ಜ್ಞಾನೇಶ್ವರ ರೆಡ್ಡಿ, ರಾಮಯ್ಯ ಗೌಡ, ದಂತಾಪೂರ, ಅಶೋಕ್ ಶನಿವಾರಂ, ಭೀಮಶಪ್ಪ ಶನಿವಾರಂ, ರಂಗಸ್ವಾಮಿ, ಚನ್ನಬಸಪ್ಪ, ಮೊಗುಲಪ್ಪ ಯಾದ್ಲಾಪುರ, ಫಯಾಜ್ ಅಹ್ಮದ್, ಮೌನೇಶ್ ಕೊಂಕಲ್, ಲಾಲಪ್ಪ ತಲಾರಿ, ವಿವಿಧ ಸಂಘಟನೆಗಳ ಮುಖಂಡರು ಇದ್ದರು.
- Advertisement -
ಗುರುಮಠಕಲ್ ತಾಲೂಕ ಕೇಂದ್ರವಾಗಿ 6 ವರ್ಷವಾದರು ಅಭಿವೃದ್ಧಿ ಮರೀಚಿಕೆಯಾಗಿದೆ, ಸರಕಾರದ ಮಲತಾಯಿ ಧೋರಣೆ ವಿರುದ್ಧ ಹಾಗೂ ಜನರಿಗೆ ಅನುಕೂಲವಾಗುವಂತೆ ಕೋರ್ಟ್ ಕಛೇರಿಗಳ ಸ್ಥಾಪನೆ ಪ್ರಯುಕ್ತ ತಾಲೂಕಿನ ಎಲ್ಲಾ ಹಳ್ಳಿ ಜನರು, ರಾಜಕೀಯ ಪಕ್ಷದ ಕಾರ್ಯಕರ್ತರು, ವರ್ತಕರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡು ಬೇಡಿಕೆ ಸಲ್ಲಿಸೋಣ.
ಆನಂದ ರಾವ್ ನೀರೇಟಿ, ವಕೀಲರು.

