ಯಾದಗಿರಿ: ನಗರದ ರೈಲ್ವೆ ನಿಲ್ದಾಣದಲ್ಲಿ ಮದ್ಯ ಸೇವಿಸಿ ಮಲಗಿದ್ದ ಪ್ರಯಾಣಿಕರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ರೈಲ್ವೆ ನಿಲ್ದಾಣದಲ್ಲಿ ಕುಡಿದು ಮಲಗಿದ್ರೆ ಬೇರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ಮೊದಲಿಗೆ ರೈಲ್ವೆ ಪೋಲಿಸರು ಬುದ್ದಿ ಮಾತು ಹೇಳಿದ್ದಾರೆ, ಆದರೂ ಪೊಲೀಸರ ಮಾತು ಕೇಳದೇ ಅಲ್ಲೇ ಮಲಗಿದ್ದ ಪ್ರಯಾಣಿಕರನ್ನು ಕಂಡು ಸಿಟ್ಟಿಗೆದ್ದ ಆರ್‌ಪಿಎಫ್ ಪೊಲೀಸರು ಕುಡಿದು ಮಲಗಿದ್ದ ಪ್ರಯಾಣಿಕರನ್ನು ಕರೆದುಕೊಂಡು ಹೋಗಿ ಕಚೇರಿಯ ಕೊಠಡಿಯಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ,
ಇದರಿಂದ ರೊಚಿಗೆದ್ದ ಪ್ರಯಾಣಿಕರು ಆರ್‌ಪಿಎಫ್ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದಲ್ಲದೆ ಪರಿಸ್ಥಿತಿ ತಿಳಿಗೊಳಿಸಲು ಹೋದ ಇನ್ನೊಬ್ಬ ಆರ್‌ಪಿಎಫ್ ಪೊಲೀಸ್ ಪೇದೆಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ರೋಮ್ ನಲ್ಲಿ ಕೊಡಿ ಹಾಕಿ ಹೊಡೆಯಲು ಕಾರಣವೇನು? ಕಾಲಿಗೆ ಬಿದ್ದರೂ ಬಿಡಲಿಲ್ಲ, ಅಂತಹ ತಪ್ಪು ನಾವೇನು ಮಾಡಿದ್ದೇವೆಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
- Advertisement -

