ಹಲವಾರು ಹಬ್ಬ, ಸಂಪ್ರದಾಯ, ಸಂಸ್ಕೃತಿ ಇವುಗಳೋಂದಿಗೆ ಇತಿಹಾಸವನ್ನು ಹೊಂದಿರುವ ದೇಶ ನಮ್ಮದು. ಒಂದೊಂದು ಹಬ್ಬವು ಒಂದೊಂದು ಕಥೆಯನ್ನು ಮತ್ತು ಒಂದೊಂದು ಸ್ವರೂಪವನ್ನು ಪಡೆದುಕೊಂಡಿವೆ. ಹಬ್ಬ ಎಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲಾ ಅದರಲ್ಲು ಶ್ರಾವಣ ಮಾಸದಲ್ಲಿ ಆರಂಭವಾಗುವ ವರಮಹಾಲಕ್ಷ್ಮಿ ಹಬ್ಬ ಮುನ್ನುಡಿ ಹಾಡಿದರೆ ಅದರೊಂದಿಗೆ ನಾ ಮುಂದು, ತಾ ಮುಂದು ಎಂದು ಬರುವುದು ರಕ್ಷಾಬಂಧನ.
ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬವೆಂದರೆ ರಕ್ಷಾ ಬಂಧನ. ಈ ಹಬ್ಬವು ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ. ಅಕ್ಕ-ತಮ್ಮ, ಅಣ್ಣಾ-ತಂಗಿ ತನ್ನ ಸಹೋದರನಿಗೆ ಎಲ್ಲದರಿಂದಲೂ ರಕ್ಷೆ ಹಾಗೂ ಜಯ ಸಿಗಲಿ ಮತ್ತು ನನ್ನ ರಕ್ಷಣೆಯ ಭಾರ ನಿನ್ನದು ಎಂದು ಸಹೋದರಿಯು, ಸಹೋದರನಿಗೆ ರಕ್ಷಾಸೂತ್ರ ಕಟ್ಟುತ್ತಾಳೆ.
ಹಿಂದಿನ ದಿನಗಳಲ್ಲಿ ರಾಖಿಯನ್ನು ಮನೆಯಲ್ಲೆ ತಯಾರಿಸುತ್ತಿದ್ದರು, ಜಗತ್ತು ಅಭಿವೃದ್ಧಿಯತ್ತ ತಿರುಗಿದಂತೆ ಖರೀದಿಸಿ ತಂದು ರಾಖಿ ಕಟ್ಟುವ ಪರಿಯತ್ತ ಬದಲಾಯಿತು ಹಾಗೆ ರಾಖಿಯಲ್ಲಿರುವ ವಿವಿಧ ಬಣ್ಣಗಳು ಒಂದೊಂದು ಸಂಕೇತದ ಪ್ರತಿಕವೆಂದು ಮನೆಯ ಹಿರಿಯರೂ ಹೆಳುತ್ತಿದ್ದರು, ಹತ್ತಿ ದಾರದ ರಾಖಿ ರಕ್ಷಣ ದಾರವು ಉತ್ತಮವಾದದ್ದು, ಇದು ಲಭ್ಯವಿಲ್ಲದಿದ್ದರೆ ಕಲವಾ ಅಂದರೆ ಕೆಂಪುದಾರ ಕಟ್ಟಬಹುದು, ರಾಖಿ ಕೊಳ್ಳುವಾಗ ಅದರಲ್ಲಿ ಕಪ್ಪು ಅಥವಾ ಕಂದು ಬಣ್ಣ ಬಳಿಸಿದ್ದರೆ ಅದು ಒಳೆತಲ್ಲಾ, ರಾಖಿಯ ಬೇಲೆ ಎಷ್ಟೇ ಇರಲಿ ಬಣ್ಣಗಳ ಮೇಲೆ ನಿಗಾ ಇರಬೇಕು. ಇನ್ನು ರಾಖಿ ಕಟ್ಟಿಸಿಕೊಳ್ಳುವ ಸಹೋದರರು ಖಾಲಿ ಕೈಯಲ್ಲಿರಬಾರದು. ಉಡುಗೊರೆ ಅಥವಾ ಹಣ ನೀಡಲೆಬೇಕು, ಸಹೋದರಿಯರ ಕಾಲಿಗೆ ಹಣೆಹಚ್ಚಿ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು ಎಂದು ನಮ್ಮ ಅಜ್ಜಾ-ಅಜ್ಜಿಯಂದಿರು ತಿಳಿ ಹೆಳುತ್ತಿದ್ದರು. ಆ ಕಾಲ ಇಂದು ಬದಲಾಗಿದೆ.
ಸ್ಟೋನ್ ಬಳಕೆಯ ಟ್ರೆಂಡಿಂಗ್ ರಾಖಿ:
- Advertisement -
ಆದುನಿಕತೆ ಬೆಳೆದಂತೆ ಎಲ್ಲಾ ರೀತಿಯ ತಂತ್ರಜ್ಞಾನಗಳ ಅಳವಡಿಕೆಯಿಂದ ರಾಖಿಯನ್ನು ಮನೆಯಲ್ಲಿ ತಯಾರಿಸುವುದು ಕಡಿಮೆನೆ, ಮಾರ್ಕೆಟಗಳಲ್ಲಿ ಮಿಂಚುತ್ತಿರುವ ಬಣ್ಣದ ರಾಖಿಯು ಬಗೆ ಬಗೆಯ ಆಕಾರ, ಸ್ವರೂಪ ಹೊಂದಿವೆ. ವಯಸ್ಸಿಗೆ ತಕ್ಕಂತ ಕಲರ್‌ಫುಲ್ ರಾಖಿ ಇಂದು ಸದ್ದು ಮಾಡುತ್ತಿವೆ. ಮಕ್ಕಳಿಗೆ ಇಷ್ಟವಾಗುವ ಗೊಂಬೆ ರಾಖಿ, ಸ್ಪೆöÊಡರ ಮ್ಯಾನ್, ಲೈಟಿಂಗ್ ರಾಖಿ, ಪಾಂಡ ರಾಖಿ, ಪ್ರಾಣಿ-ಪಕ್ಷೀಗಳ ಚಿತ್ರಣದ ರಾಖಿ, ನವಿಲಿನ ರಾಖಿ, ಜೆಲ್ಲಿ ರಾಖಿ, ಸ್ಪೀನ್ನರ್, ಮೋಟೂ-ಪತ್ಲು, ಡೊರೆಮಾನ್ ರಾಖಿ, ಸ್ಪಂಜಿನ ರಾಕಿ ಇದ್ದರು ಮಕ್ಕಳಿಗೆ ಲೈಟಿಂಗ್, ಲೈಟಿಂಗ್ ರಾಖಿಯ ಮೇಲೆ ಹೆಚ್ಚು ಪ್ರಿತಿ.
ಇನ್ನೂ ಕಾಲೇಜು ವಿದ್ಯಾರ್ಥಿಗಳಿಗಂತೂ ರಾಖಿಯ ಕ್ರೇಜು ಅತೀ ಇರುವುದು, ಕೈ ತುಂಬ ಹೆಚ್ಚು ರಾಖಿ ಕಟ್ಟಿಸಿಕೊಳ್ಳುವ ಹುಚ್ಚಿನೋಂದಿಗೆ ವ್ಯರೈಟಿ ಬಯಸುವ ಪಡ್ಡೆ ಹುಡುಗರಿಗೆ ಸ್ಟೋನ್ ರಾಖಿಯಿಂದ ಹಿಡಿದು ಮೊಡರ್ನ ರಾಖಿ, ಫ್ಲರ‍್ಸ ರಾಖಿ, ಹವಳದ ರಾಖಿ, ನೆಮ್ ಪ್ಲೇಟ ರಾಖಿ, ಬೆಳ್ಳಿ-ಬಂಗಾರವೂ ನಾಚುವಂತಹ ಸೀಲ್‌ವರ್ ಬಣ್ಣದ ರಾಖಿ, ಅಣ್ಣ-ತಂಗಿಯ ಪೋಟೋ ಹಾಕಿರುವ ರಾಖಿ, ತಟ್ಟೆ ರಾಕಿ, ಜುಮುಕಿ ರಾಖಿ, ನವಿಲು ರಾಖಿ, ಗ್ರಾö್ಯಂಡ ರಾಖಿ ಇದೇಲ್ಲ ಕಾಲೇಜು ವಿದ್ಯಾಥಿಗಳಿಗೆ ಕ್ರೇಜ್ ಆದ್ರೆ ಇತ್ತ ವಯಸ್ಸಾದವರಿಗೆ ಸುಗಂಧದ ರಾಖಿ, ಗೊಂಡೆ ರಾಖಿ, ಪ್ಯಾನ್ಸಿ ರಾಖಿ, ಚಮಕಿ ರಾಕಿ, ಮುತ್ತಿನ ರಾಖಿ, ಎರಡು ಎಳೆಯ ದಾರಕ್ಕೆ ಮೂರು ಮುತ್ತಿದ್ದರೆ ಸಾಕು ಎನ್ನುವ ಇವರುಗಳ ಮಧ್ಯೆ ಫುಲ್ ಟ್ರೇಂಡಿಗನಲ್ಲಿ ಬ್ರೋ(BRO) ಬ್ರದರ್(BROTHER) ಭಾಯಿ (BHAI) ಸ್ಮಾರ್ಟ ಬ್ರೋ (SMART BRO) ಅಣ್ಣಾ ಎಂದೆಲ್ಲಾ ಅಕ್ಷರದ ಒಂದೇಡೆ ಆದರೆ ದೇವರುಗಳ ಮೂರ್ತಿ ಹೊತ್ತು ಸಕಾರಾತ್ಮಕತೆಯ ಮೆರಗಿನಿಂದ ಕಂಗೋಳಿಸುತ್ತಿರುವ ರಾಖಿ ಇನ್ನೊಂದೆಡೆಗೆ ಸಂಭ್ರಮಿಸುತ್ತಿವೆ.
ಸಹೋದರಿ ಕಟ್ಟುವ ರಾಖಿ ಕೇವಲ ಒಂದು ದಾರವಲ್ಲ. ಅದು ಇಬ್ಬರ ನಡುವಿನ ಶುದ್ಧ, ಪವಿತ್ರ ಮತ್ತು ನಿರಂತರ ಪ್ರೀತಿಯ ಗುರುತು, ಜೊತೆಗೆ ಶಾಶ್ವತ ರಕ್ಷಣೆಗಾಗಿ ಮಂತ್ರದೊಂದಿಗೆ ಬೆರೆತಿದೆ. ಬರಹದ ಮೂಲಕ ಹೇಳಲಾಗದ ಸಂಬಂಧ, ಹೇಳಿದರೂ ಅರ್ಥವಾಗದ ಅನುಬಂಧ, ಅರ್ಥವಾದರೂ ಅರ್ಥೈಸಿಕೊಳ್ಳಲಾಗದ ಎಳೆಳೂ ಜನುಮದ ಅನುಬಂಧ ಅದುವೇ ಅಣ್ಣಾ-ತಂಗಿಯ ಪ್ರೀತಿ ವಾತ್ಸಲ್ಯದ ಋಣಾನುಬಂಧ.
ಬರಹ: ಲಕ್ಷ್ಮಿ ಬಾಗಲಕೋಟಿ (ವಿಜಯಪುರ)

