ಸತ್ಯಕಾಮ ವಾರ್ತೆ ಗುರುಮಠಕಲ್:
ಗ್ರಾಮೀಣ ಭಾಗದಲ್ಲಿ ಇಂದು ಸಂಘಟನೆಯ ಅವಶ್ಯವಿದೆ. ಎಲ್ಲರೊಂದಿಗೆ ಸಹೋದರತ್ವ ಭಾವನೆಯಿಂದ ಇದ್ದು ನ್ಯಾಯಕ್ಕಾಗಿ ಹೋರಾಟ ನಡೆಸಬೇಕು. ತಪ್ಪು ಮಾಡಿದವರ ವಿರುದ್ಧ ಹೋರಾಟ ಇರಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಗಣೇಶ್ ದುಪ್ಪಲ್ಲಿ ಸಲಹೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಿ ಅವರು ಮಾತನಾಡಿದರು.
ಮಾದಿಗ ದಂಡೋರದ ರಾಷ್ಟ್ರೀಯ ನಾಯಕ ಮಂದಕೃಷ್ಣ ಮಾದಿಗ ಅವರ 30 ವರ್ಷಗಳ ನಿರಂತರ ಹೋರಾಟದ ಪ್ರತಿಫಲವಾಗಿ ಕಳೆದ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ಒಳ ಮೀಸಲಾತಿ ವರ್ಗೀಕರಣವನ್ನು ಆಯಾ ರಾಜ್ಯಗಳು ಅಂಗೀಕರಿಸಿ ಜಾರಿಗೊಳಿಸಬಹುದು ಎಂದು ತೀರ್ಪ ನೀಡಿದೆ. ಆದರೆ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಒಳ ಮೀಸಲಾತಿಯನ್ನು ತೀರ್ಪು ಬಂದು ಎರಡು ಮೂರು ತಿಂಗಳು ಕಳೆದರೂ ಮೀಸಲಾತಿಯನ್ನು ಅಂಗೀಕರಿಸಿ ಜಾರಿಗೊಳಿಸಿಲ್ಲ. ಒಳ ಮೀಸಲಾತಿ ಜಾರಿಗೆಯ ವಿಳಂಭ ದೋರಣೆಯು ಸಹಿಸಲಾಗದು ಎಂದರು.
- Advertisement -
ಭೀಮಶಪ್ಪ ಗೂಡ್ಸೆ ಮಾತನಾಡಿ, ಮೀಸಲಾತಿ ವಿಚಾರವಾಗಿ ಹಳ್ಳಿಯಿಂದ ದಿಲ್ಲಿಗೆ ತೆರಳಿದ ನಾಯಕರು ಮಾತಾಡುತ್ತಿಲ್ಲ. ಅವರು ಹೇಳಿದರೆ ಆಗಿ ಬಿಡುತ್ತದೆ, ಇಂದು ದುರ್ಬಲರಿಗೆ ಮೀಸಲಾತಿ ಲಾಭ ಸಿಗಬೇಕು ಎಂದರು.
ನೂತನ ಪದಾಧಿಕಾರಿಗಳು: ಅಧ್ಯಕ್ಷ ರವಿ ಎಮ್.ಟಿ.ಪಲ್ಲಿ, ಉಪಾಧ್ಯಕ್ಷ ಶರಣಪ್ಪ ಅಮ್ಮಪಲ್ಲಿ,ಗೌರವ ಅಧ್ಯಕ್ಷ ವೆಂಕಟೇಶ ಪುಟಪಾಕ್, ಪ್ರ.ಕಾರ್ಯದರ್ಶಿ ಮಹಾದೇವ ಗಾಜರಕೋಟ, ಕಾರ್ಯದರ್ಶಿ ನಿಲೇಶ್ ನಜರಾಪೂರ, ಸಹ ಕಾರ್ಯದರ್ಶಿ ನಾಗೇಶ್ ಚಂಡ್ರಿಕಿ, ಖಜಾಂಚಿ ನರಸಪ್ಪ ಹಿಮಲ್ಹಾಪೂರ, ನಗರ ಅಧ್ಯಕ್ಷ ಶ್ರೀನಿವಾಸ ಕಿಂದಿಂಟಿ, ನಗರ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸೈಧಪೋಳ್, ಕಾನೂನು ಸಲಹೆಗಾರ ಬುಗ್ಗಪ್ಪ ಕಾಕಲವಾರ, ಪ್ರಚಾರ ಸಮೀತಿಯ ಅಧ್ಯಕ್ಷ ಕಿಷ್ಣಪ್ಪ ಸೈಧಪೋಳ್, ನಗರ ಕಾರ್ಯದರ್ಶಿ ಅನಿಲ್ ಬಸ್ಸಪ್ಪೋಳ್ ಸಹಾಯಕ ಕಾರ್ಯದರ್ಶಿ ಭೀಮಶಪ್ಪ ಮಿನಿಂಟಿ ಅವರನ್ನು ಆಯ್ಕೆ ಮಾಡಲಾಯಿತು.

