ಕಲಬುರಗಿ: ಪೌರರಾದ ಯಲ್ಲಪ್ಪ ಎಸ್ ನಾಯ್ಕೋಡಿ ರವರಿಗೆ ಉದಯ ನಗರ ನಾಗರಿಕರಿಂದ ಅದ್ದೂರಿ ಹೃದಯಸ್ವರ್ಶ ಸನ್ಮಾನ ಕಾರ್ಯಕ್ರಮ,
ಕಾರ್ಯಕ್ರಮದ ಅತಿಥಿಗಳಾಗಿ ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಮ ಪ್ರಭು ಪಾಟೀಲ ಕೂಡ ಭಾಗಿಯಾಗಲಿದ್ದಾರೆ.
ಕಲಬುರಗಿ ನಗರದ ೫೩ನೇ ವಾರ್ಡನಿಂದ ಮಹಾನಗರ ಪಾಲಿಕೆಗೆ ಸದಸ್ಯರಾಗಿ ಆಯ್ಕೆಯಾಗಿದ್ದ ಯಲ್ಲಪ್ಪ. ಎಸ್. ನಾಯ್ಕೋಡಿ ಇವರು, ನೂತನವಾಗಿ ಕಲಬುರಗಿ ಮಹಾನಗರ ಪಾಲಿಕೆಗೆ ಮಹಾ ಪೌರರಾಗಿ ನೇಮಕಗೊಂಡ ಪ್ರಯುಕ್ತ ದಿನಾಂಕ: ೭-೦೮-೨೦೨೪ ರಂದು ಮುಂಜಾನೆ ೧೦.೩೦ ಗಂಟೆಗೆ ಉದಯ ನಗರ ಬಡಾವಣೆಯ ನಾಗರಿಕರಿಂದ ಮಹಾ ಪೌರರಿಗೆ ಅದ್ದೂರಿಯಾಗಿ ಹೃದಯಸ್ವರ್ಶ ಸನ್ಮಾನ ಹಮ್ಮಿಕೊಳ್ಳಲಾಗಿದೆ, ಸದರಿ ಕಾರ್ಯಕ್ರಮಕ್ಕೆ ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಮ ಪ್ರಭು ಪಾಟೀಲ ರವರು ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಹಾಗೂ ಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನು ಉದಯ ನಗರ ಬಡಾವಣೆಯ ಸಂಘದ ಅಧ್ಯಕ್ಷರಾದ ಮೋನಪ್ಪ ಬಡಿಗೇರ ವಹಿಸಲಿದ್ದಾರೆ ಪ್ರಯುಕ್ತ ಸದರಿ ಕರ್ಯಾಕ್ರಮಕ್ಕೆ ಬಡಾವಣೆಯ ಜನತೆಯು ಮಹಾಪೌರರ ಅಭೀಮಾನಿಗಳು ಹೆಚ್ಚನ ಸಂಖೈಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕಾರ್ಯದರ್ಶಿಗಳಾದ ದೇವೆಂದ್ರಪ್ಪ ತೋಟ್ನಳ್ಳಿ ಮತ್ತು ಗುರುರಾಜ ಕುಲಕರ್ಣಿ ಪತ್ರಿಕಾ ಪ್ರಕಟಣೆ ಮೂಲಕ ತೀಳಿಸಿರುತಾರೆ.
- Advertisement -

