ಸತ್ಯಕಾಮ ಪ್ರತಿಫಲ: ಎಲ್ಲರಿಗಿಂತ ಮೊದಲು ಸುದ್ದಿ ಪ್ರಕಟಿಸಿದ್ದೇ ನಾವು
ಸತ್ಯಕಾಮ ವಾರ್ತೆ ಗುರುಮಠಕಲ್ :
ತಾಲೂಕಿನ ಚಿಂತನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ವಿಜ್ಞಾನ ಪ್ರಯೋಗಾಲಯದ ಮೇಲ್ಚಾವಣಿಯ ಕುಸಿತದ ಬಗ್ಗೆ ಇತ್ತೀಚಿಗೆ ದಿ. 21 ಸೆಪ್ಟೆಂಬರ್ ರಂದು “ಶಾಲಾ ಕೊಠಡಿಯ ಮೇಲ್ಪಾವಣಿಯ ಸಿಮೆಂಟ್ ಕುಸಿತ; ತಪ್ಪಿದ ಭಾರಿ ಅನಾಹುತ” ಶೀರ್ಷಿಕೆ ಅಡಿಯಲ್ಲಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಲಾಗಿತ್ತು, ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಶಾಲಾ ಮೆಲ್ಚಾವಣಿಯ ದುರಸ್ಥಿ ಕಾರ್ಯ ಮಾಡುವಲ್ಲಿ ಮುಂದಾಗಿದ್ದಾರೆ.
- Advertisement -

ತಾಲೂಕಿನ ಚಿಂತನಹಳ್ಳಿ ಗ್ರಾಮದಲ್ಲಿ ನೂತನ ಕೋಠಡಿಗಳನ್ನು ಹಸ್ಥಾಂತರಿಸಿ ಒಂದು ವರ್ಷವು ಕಳೆಯುವ ಮುನ್ನ ಗುರುವಾರ ಜರುಗಿದ ಅನಾಹುತವನ್ನು ಬೆಳಕಿಗೆ ತಂದ ಕೂಡಲೇ ಶಾಲೆಗೆ ಭೇಟಿ ನೀಡಿ ಮೇಲ್ಚಾವಣಿಯನ್ನು ಸಂಪೂರ್ಣವಾಗಿ ತೆಗೆಸಿ ಮರು ಪ್ಲಾಸ್ಟರ್ ಮಾಡಿಸಲು ಮುಂದಾಗಿರುವುದು ಗ್ರಾಮಸ್ಥರಲ್ಲಿ, ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳಲ್ಲಿ ಸಂತಸ ತಂದಿದೆ ಹಾಗೂ ಮುಂದಿನ ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡುವಂತೆ ತಾಕೀತು ಮಾಡಿದರು.
ಕಳೆದ ೨೦೨೨-೨೩ ನೇ ಸಾಲಿನ ಕೆ.ಕೆ.ಆರ್.ಡಿ.ಬಿ ಯೋಜನೆ ಅಡಿಯಲ್ಲಿ ನಿರ್ಮಿತಿ ಕೇಂದ್ರದವರಿಂದ ನಿರ್ಮಿಸಲಾದ ನಾಲ್ಕು ಕೋಠಡಿಗಳನ್ನು ನ. ೦೨ ರಂದು ಶಾಲೆಗೆ ಹಸ್ಥಾಂತರಿಸಲಾಗಿತ್ತು.
—————————————
- Advertisement -
ಪತ್ರಿಕೆಯಲ್ಲಿ ವರದಿ ಬಂದ ಕೂಡಲೇ ಸ್ಥಳಕ್ಕೆ ತೆರಳಿ ಮೆಲ್ಚಾವಣಿಯ ಸಂಪೂರ್ಣವಾಗಿ ತೆಗೆಸಿ ಮರು ಪ್ಲಾಸ್ಟರಿಂಗ್ ಮಾಡಿಸಿಕೊಟ್ಟಿದ್ದೇವೆ.
ಅಬ್ದುಲ್ ನಭಿ, ಯೋಜನಾ ಅಭಿಯಂತರರು ನಿರ್ಮಿತಿ ಕೇಂದ್ರ.
———————–
- Advertisement -
ಮೆಲ್ಚಾವಣಿಯ ಪ್ಲಾಸ್ಟರ್ ಅವೈಜ್ಞಾನಿಕವಾಗಿ ಮಾಡಿದ್ದು ಅವಶ್ಯಕತೆಗಿಂತಲು ಹೆಚ್ಚಾಗಿ ಸಿಮೆಂಟ್ ಹಾಕಲಾಗಿದೆ. ಇಂದು ಗಂಗಾವತಿಯ ಅಂಗನವಾಡಿಯಲ್ಲಿಯೂ ಇದೇ ರೀತಿ ಘಟನೆ ಜರುಗಿದ್ದು ಅಧಿಕಾರಿಗಳು ಶಾಲೆಗಳಿಗೆ ಹಸ್ತಂತರಿಸುವ ಮುನ್ನ ಗುಣಮಟ್ಟತೆ ಕಾಯ್ದಕೊಳ್ಳಬೇಕು ಇಲ್ಲವಾದಲ್ಲಿ ಉಗ್ರಹೋರಾಟ ಮಾಡಬೇಕಾಗಿತ್ತದೆ-
ನಾಗೇಶ ಗದ್ದಗಿ, ಗುರುಮಠಕಲ್ ತಾಲೂಕ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಗುರುಮಠಕಲ್.

