ಸತ್ಯಕಾಮ ವಾರ್ತೆ ಶಹಾಪುರ:
ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಸೊಗಡಿನ ಕಲೆಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಅವುಗಳನ್ನು ಮುನ್ನೆಲೆಗೆ ತರಲು ಸಂಘ ಸಂಸ್ಥೆಗಳು ಸಾಕಷ್ಟು ಶ್ರಮಿಸುತ್ತಿವೆ ಎಂದು ಗುಂಬಳಾಪುರ ಮಠದ ಯೋಗಿರತ್ನ ಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.
ನಗರದ ಗುಂಬಳಾಪುರ ಮಠದ ಕಲ್ಯಾಣ ಮಂಟಪದಲ್ಲಿ ಪೂಜ್ಯ ಶ್ರೀ ಚನ್ನಬಸವ ಸಂಗೀತ ಮತ್ತು ಸಾಂಸ್ಕೃತಿಕ,ಸಾಹಿತ್ಯ,ಜನಪದ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಯಾದಗಿರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಸಂಗೀತ ಮತ್ತು ನಾಟಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾಡಿಗೆ ಜಾಗೃತಿ ಮೂಡಿಸುವ ಬೀದಿ ನಾಟಕಕಲಾವಿದರು, ಹಾಗೂ ಟಿವಿ,ಧಾರವಾಹಿಗಳಿಂದ ಕಲೆ ಮತ್ತು ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು,ಇಂಥಹ ಸಂದರ್ಭದಲ್ಲಿ ಹಲವಾರು ಬಾಲ ಪ್ರತಿಭೆ ಹಾಗೂ ಯುವ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸಿ ಕೊಡುವುದರ ಜೊತೆಗೆ ಕಲೆಯನ್ನು ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ನುಡಿದರು.
ವೀಡಿಯೊ: ಲಂಚ ಪಡೆಯುವ ಪಿಡಿಓಗಳಿಗೆ ಖಡಕ್ ವಾರ್ನಿಂಗ್ ನೀಡಿದ ಡಿಸಿಎಂ ಡಿ. ಕೆ.ಶಿವಕುಮಾರ್| Satyakam News
ಈ ಸಮಾರಂಭದ ವೇದಿಕೆ ಮೇಲೆ ಇನ್ನೋರ್ವ ಅತಿಥಿಗಳು ಹಾಗು ಸಾಹಿತಿ,ಸಂಘಟಕ,ಪತ್ರಕರ್ತ, ಬಸವರಾಜ ಶಿಣ್ಣೂರ ಮಾತನಾಡಿ, ಸಂಗೀತಕ್ಕೆ ಅಘಾತವಾದ ಶಕ್ತಿ ಇದೆ, ಸಂಗೀತಕ್ಕೆ ಈ ಪ್ರಪಂಚದಲ್ಲಿ ತಲೆ ತೂಗದವರೇ ಇಲ್ಲ,ಸಂಗೀತ ಆಲಿಸುವುದರಿಂದ, ಮನಸ್ಸಿಗೆ ಮುದ ನೀಡುವುದರ ಜೊತೆಗೆ, ಪಾರ್ಶುವಾಯು ನಂತಹ ಮಹಾ ರೋಗಗಳು ವಾಸಿ ಆಗುತ್ತದೆ ಎಂಬುದನ್ನು ವಿಜ್ಞಾನಿಗಳೆ ಸ್ಪಷ್ಟಪಡಿಸಿದ್ದಾರೆ,ಎಂದು ಹೇಳಿದರು. ಆದ್ದರಿಂದ ಕಲೆಯನ್ನು ಪ್ರೋತ್ಸಾಹಿಸುವ ಕೆಲಸ ನಾವು ನೀವೆಲ್ಲರೂ ಮಾಡಬೇಕಾಗಿದೆ ಎಂದರು.
- Advertisement -
ಈ ಸಮಾರಂಭದ ವೇದಿಕೆಯ ಮೇಲೆ.ಸುರಪುರ ಪತ್ರಿಮಠದ ಶಿವಕುಮಾರ, ಮೆಹಬೂಬ್ ಸಾಬ್ ತಡಬಿಡಿ, ರಂಗಭೂಮಿ ಕಲಾವಿದ ಶ್ರೀನಿವಾಸ್ ದೋರನಹಳ್ಳಿ, ಸಂಗೀತ ಕಲಾವಿದ ಗುರುಪಾದ ಹುಣಸಿಗಿಡ, ಡಿ ಜೂನ್ ನೃತ್ಯ ಅಕಾಡೆಮಿ ಅಧ್ಯಕ್ಷರ ಲಕ್ಷ್ಮಿ ಕುಂಬಾರ,ಚಿದಾನAದಯ್ಯ ಚಿಕ್ಕಮಠ ಹಾಗೂ ಸಂಸ್ಥೆಯ ಕಾರ್ಯದರ್ಶಿಗಳು ಉಪಸ್ಥಿತರಿದ್ದರು, ಈ ಸಂಸ್ಥೆಯ ಅಧ್ಯಕ್ಷರಾದ ಬೂದಯ್ಯ ಸ್ವಾಮಿ ಹಿರೇಮಠ, ಇನ್ನಿತರರು ಹಾಜರಿದ್ದರು. ನಂತರ ನೀನಾಸಮ್ ತರಬೇತಿ ಪಡೆದು ವಿದ್ಯಾರ್ಥಿಗಳಿಂದ ಟ್ಯಾಬ್ಲೆಟ್ ಎಂಬ ಸುಂದರ ಸಾಮಾಜಿಕ ಹಾಗೂ ಜಾಗೃತಿ ಕಿರು ನಾಟಕ ಜರುಗಿತು, ನಂತರದಲ್ಲಿ ಹಲವಾರು ಸಂಗೀತ, ನೃತ್ಯ,ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

