ಸತ್ಯಕಾಮ ವಾರ್ತೆ ಶಹಾಪುರ:
ಎಸ್,ಎಸ್.ಎಲ್ ಸಿ.ಪರೀಕ್ಷೆಯ ಮೊದಲ ದಿನವಾದ ಸೋಮವಾರದಂದು ತಾಲೂಕಿನಾದ್ಯಂತ ಸುಗಮವಾಗಿ ನಡೆದಿದ್ದು.ಅದರಲ್ಲೂ ತಾಲೂಕಿನ ಸಗರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮಗನೊಂದಿಗೆ ಇಂದು ತಾಯಿ ಹತ್ತನೇ ತರಗತಿಯ ಪರೀಕ್ಷೆ ಬರೆಯಲು ಆಗಮಿಸಿದ್ದು ವಿಶೇಷವಾಗಿತ್ತು.ಒಟ್ಟು ಈ ಪರೀಕ್ಷಾ ಕೇಂದ್ರದಲ್ಲಿ 17 ಬ್ಲಾಕ್ ಗಳಿದ್ದು 387 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು,14 ವಿದ್ಯಾರ್ಥಿಗಳು ಗೈರು ಹಾಜರಿದ್ದರು.
33 ವರ್ಷದ ಗಂಗಮ್ಮ ಎಂಬ ಮಹಿಳೆ ಉತ್ಸಾಹದಿಂದ ಪರೀಕ್ಷೆ ಬರೆಯಲು ಆಗಮಿಸಿದ್ದರು, ಎಸ್.ಎಸ್,ಎಲ್,ಸಿ ಪರೀಕ್ಷೆ ಬರೆಯುವ ಮೂಲಕ ರಾಜ್ಯದಾದ್ಯಂತ ಗಮನ ಸೆಳೆದಿದ್ದಾರೆ,ನನಗೆ ಓದಬೇಕೆಂಬ ಬಯಕೆ ತುಂಬಾ ಇತ್ತು ಆದರೆ ಮನೆಯಲ್ಲಿ ಬಡತನ ಹಾಗೂ ನನಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಿಕೊಟ್ಟ ಕಾರಣದಿಂದಾಗಿ ನನಗೆ ವಿದ್ಯಾಭ್ಯಾಸ ಮೂಟಕು ಗೊಳಿಸಲು ಕಾರಣವಾಯಿತು,ಈಗ ನನಗೆ ಅವಕಾಶ ಸಿಕ್ಕಿದೆ,ಆದರೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕಷ್ಟಪಟ್ಟು ಓದಿ 10ನೇ ತರಗತಿ ಪಾಸ್ ಮಾಡಿ ಯಾವುದಾದರೂ ಸರ್ಕಾರಿ ಹುದ್ದೆ ಪಡಿಯಬೇಕೆಂಬ ಆಸೆ ನನ್ನೊಳಗೆ ಚಿಗುರೊಡೆದ ಕಾರಣ ಇಂದು ನನ್ನ ಮಗ ಮಲ್ಲಿಕಾರ್ಜುನ ಜೊತೆಗೆ ನಾನು ಹತ್ತನೇ ತರಗತಿಯ ಪರೀಕ್ಷೆ ಬರೆಯುತ್ತಿದ್ದೇನೆ ಎಂದರು.
ಮನೆಯಲ್ಲಿ ತನ್ನ ಮಗನೊಂದಿಗೆ ಸತತ ಅಭ್ಯಾಸ ಮಾಡಿ ತನಗಿಂತ ಹದಿನೈದು ವರ್ಷದ ಕಿರಿಯ ವಿದ್ಯಾರ್ಥಿಗಳ ಜೊತೆಗೆ ಇಂದು ಪರೀಕ್ಷೆ ಬರೆಯಲು ತುಂಬಾ ನನಗೆ ಖುಷಿ ನೀಡುತ್ತಿದೆ ಎಂದು ಮುಗುಳ್ನಕ್ಕರು ಕಾರಣ ಇಷ್ಟೇ. ನನ್ನಂತ ಅದೆಷ್ಟೋ ಜನ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ,ಅವರನ್ನೆಲ್ಲರನ್ನು ಪ್ರೇರೇಪಿಸುತ್ತಾ,ಶಾಲೆಗೆ ಕರೆ ತರುವುದೇ ನನ್ನ ಮುಖ್ಯ ಉದ್ದೇಶವಾಗಿದೆ.ಕಲಿಯುವವರಿಗೆ ಯಾವುದೇ ಸಮಯ ಹಾಗೂ ವಯಸ್ಸಿನ ಮಿತಿ ಇಲ್ಲ ಎಂಬ ಮಾತನ್ನು ಗಂಗಮ್ಮಳು ಮತ್ತೊಮ್ಮೆ ಸಾಬೀತು ಮಾಡಿದ್ದಾಳೆ.
- Advertisement -
ಅಭ್ಯಾಸಕ್ಕೆ ವಯಸ್ಸಿನ ಹಂಗಿಲ್ಲ ಎಂಬ ಮಾತಿಗೆ ಗಂಗಮ್ಮಳೆ ಸಾಕ್ಷಿ, ಇಂಥ ವಯಸ್ಸಿನಲ್ಲೂ ಮಗನೊಂದಿಗೆ ಪರೀಕ್ಷೆ ಬರೆಯಲು ಮುಂದಾಗಿದ್ದು ನಿಜಕ್ಕೂ ಇವರ ಕಾರ್ಯ ಶ್ಲಾಘನೀವಾದದ್ದು,ಎಂದು ಗ್ರಾಮದ ನಾಗರಿಕರು,ಪ್ರಗತಿಪರ ಚಿಂತಕರು ಹರ್ಷ ಭಕ್ತ ಪಡಿಸಿದ್ದಾರೆ ಶಿಕ್ಷಣ ವಂಚಿತ ಮಹಿಳೆಯರಿಗೆ ಇವರೇ ಮಾದರಿ ಎಂಬುವುದು ತೋರಿಸಿಕೊಟ್ಟಿದ್ದಾರೆ.ಹಲವಾರು ಜವಾಬ್ದಾರಿಗಳ ನಡುವೆ ಶ್ರದ್ಧೆಯಿಂದ ಮಾಡಿದ ಸಾಧನೆ ನಮ್ಮ ಮಕ್ಕಳಿಗೆ ಮಾದರಿಯಾದರೆ ಎಷ್ಟೊಂದು ಒಳ್ಳೆಯದು ಎಂದೆನಿಸುತ್ತಿದೆ.

