ಸತ್ಯಕಾಮ ವಾರ್ತೆ ಯಾದಗಿರಿ:
ಕನಕ ನೌಕರರ ಸಂಘದ ಸಂಘಟನೆಯನ್ನು ಬಲಗೊಳಿಸಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕಲಬುರ್ಗಿ ವಿಭಾಗೀಯ ಕನಕ ನೌಕರ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಕೂಂಕಲ್ ಹೇಳಿದರು.
ಭಾನುವಾರ ಯಾದಗಿರಿ ಪಟ್ಟಣದ ಕುರುಬ ಸಂಘದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಯಾದಗಿರಿ ಜಿಲ್ಲಾ ಕನಕ ನೌಕರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಮಾತನಾಡಿದ ಅವರು ನಮ್ಮ ಸಮಾಜದ ನೌಕರ ಮೇಲಿನ ಕಿರುಕುಳ ಕಂಡುಬಂದಲ್ಲಿ ಒಗ್ಗಟ್ಟಿನಿಂದ ಎಲ್ಲರೂ ಹೋರಾಟ ಮಾಡುವಂತೆ ಸಲಹೆ ನೀಡಿದರು.
ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಮಲ್ಲಣ್ಣ ಐಕೂರ ಮಾತನಾಡಿ ಕನಕ ನೌಕರರ ಸಂಘದ ಬೆಂಬಲಕ್ಕೆ ಜಿಲ್ಲಾ ಕುರುಬ ಸಂಘದಿಂದ ಸಂಪೂರ್ಣ ಬೆಂಬಲವಿರುತ್ತದೆ ಏನಾದರೂ ಸಮಸ್ಯೆಗಳು ಕಂಡುಬಂದಲ್ಲಿ ನಮ್ಮ ಗಮನಕ್ಕೆ ತರುವಂತೆ ಹೇಳಿದರು.
- Advertisement -
- ನೂತನ ಪದಾಧಿಕಾರಿಗಳ ವಿವರ.
- ಅಯಣ್ಣ ಇನಾಮದಾರ, ಜಿಲ್ಲಾಧ್ಯಕ್ಷ,
- ಮಲ್ಲಿಕಾರ್ಜುನ್ ಪೂಜಾರಿ ಉಪಾಧ್ಯಕ್ಷ,
- ಪ್ರಧಾನ ಕಾರ್ಯದರ್ಶಿ ಮನೋಹರ್ ಕಟ್ಟಿಮನಿ,
- ಖಜಾಂಚಿ ದೇವೇಂದ್ರಪ್ಪ ಕರಿಕಳ್ಳಿ,
ಸಂಘಟನಾ ಕಾರ್ಯದರ್ಶಿಗಳಾಗಿ ಚಂದ್ರಶೇಖರ್ ಧನವಾಡ, ಬನ್ನಪ್ಪ ಮೈಲಾಪುರ, ಬೀರಪ್ಪ ಸಂಕಿನ, ಸಹ ಕಾರ್ಯದರ್ಶಿಗಳಾಗಿ ದ್ಯಾಮಣ್ಣ ಹುಣಸಿಗಿ, ಸಿದ್ದು ಬಡಿಗೇರ್, ಹಾಗೂ ಪ್ರತಿ ತಾಲೂಕಿನಿಂದ ಐದು ಜನ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕುರುಬ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ ಮಗ್ಗ, ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ಜಿಲ್ಲಾ ಹಿರಿಯ ನಾಗರಿಕ ಮತ್ತು ಅಂಗವಿಕಲ ಕಲ್ಯಾಣ ಅಧಿಕಾರಿ ಶರಣಗೌಡ ಪಾಟೀಲ್ ಕ್ಯಾತನಾಳ, ಸರಕಾರಿ ನೌಕರರ ಸಂಘದ ವಡಗೇರಾ ತಾಲೂಕು ಅಧ್ಯಕ್ಷ ಶಂಕ್ರಪ್ಪ ಗೂಂದೆನೂರ, ಕುರುಬ ಸಂಘದ ತಾಲೂಕು ಅಧ್ಯಕ್ಷ ಸೂರ್ಯಕಾಂತ ಅಲ್ಲಿಪೂರ ,ಚಂದ್ರಕಾಂತ ನಾಯ್ಕೋಡಿ, ಸಾಯಿಬಣ್ಣ ಕೆಂಗೂರಿ, ಮಲ್ಲಯ್ಯ ಕಸಬಿ, ಹಾಗೂ ಕನಕ ನೌಕರ ಸಂಘದ ನಿರ್ದೇಶಕರು ಪದಾಧಿಕಾರಿಗಳು ವಿವಿಧ ಇಲಾಖೆಯ ನೌಕರರು ಕುರುಬ ಸಮಾಜದ ಮುಖಂಡರು ಉಪಸ್ಥಿತರಿದ್ದರು.

