ವರದಿ: ಶ್ರೀಶೈಲ್ ಪೂಜಾರಿ
ಸತ್ಯಕಾಮ ವಾರ್ತೆ ಮುದ್ದೇಬಿಹಾಳ;
ಸರ್ಕಾರಿ ಕೆಲಸ ದೇವರ ಕೆಲಸ. ಈ ಮಾತನ್ನು ಸಾರ್ಥಕ ಪಡಿಸಬೇಕಾದರೆ ಸರ್ಕಾರಿ ನೌಕರರು ತಮ್ಮ ದಿನನಿತ್ಯ ಸೇವಾ ಮನೋಭಾವದಿಂದ ದುಡಿಯಬೇಕು ಆದರೆ ತಾಲೂಕಿನ ಗರಸಂಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ವೈದ್ಯರು ಸರ್ಕಾರಕ್ಕೆ ಚಳ್ಳೆ ಹಣ್ಣು ತಿನ್ನಿಸಿ ಗೈರು ಹಾಜರಾಗಿ ಸಂಬಳ ಪಡೆಯುತ್ತಿರುವುದು ಸತ್ಯಕಾಮ ಪತ್ರಿಕೆಯಿಂದ ಬಯಲಿಗೆ ಬಿದ್ದಿದೆ.
- Advertisement -
ಹೌದು.. ಪ್ರಾಥಮಿಕ ಆರೋಗ್ಯ ಕೇಂದ್ರ ಗರಸಂಗಿ ಗ್ರಾಮದ ಆಸ್ಪತ್ರೆಗೆ ಒಟ್ಟು 6 ಉಪ ಕೇಂದ್ರಗಳು ಒಳಪಡುತ್ತವೆ ಅದರಲ್ಲಿ ಕವಡಿಮಟ್ಟಿ, ಆಲೂರು, ಸರೂರು, ರಕ್ಕಸಗಿ, ಗರಸಂಗಿ ಸೇರಿದಂತೆ ಹಲವು ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತದೆ. ವೈದ್ಯೋ ನಾರಾಯಣೋ ಹರಿಃ ಎಂಬಂತೆ ವೈದ್ಯನಾದವನು ದೇವರಿಗೆ ಸಮಾನವಾದವನು. ಆತನು ರೋಗಿಯ ರೋಗವನ್ನು ಗುಣಪಡಿಸುವನು. ಮುಚ್ಚುಮರೆ ಮಾಡದೇ ರೋಗಿಯು ತನ್ನ ಸಮಸ್ಯೆಗಳನ್ನು ಹೇಳುವುದು ಕೇವಲ ವೈದ್ಯನ ಮುಂದೊಂದೇ. ಆದರೆ ಇಲ್ಲಿ ಆ ವೈದ್ಯರೆ ಹಂತಕರಾಗುವ ಪ್ರಶ್ನೆ ಎದುರಾಗಿದೆ. ವೈದ್ಯರ ಬದಲಿಗೆ ಇಲ್ಲಿ ಬರುವ ರೋಗಿಗಳಿಗೆ ನರ್ಸ್, ಲ್ಯಾಬ್ ಟೆಕ್ನಿಷಿಯನ್ ಸೇರಿ ಬೇರೆ ಸಿಬ್ಬಂದಿಗಳು ಚಿಕಿತ್ಸೆ ನೀಡುತ್ತಿದ್ದಾರೆ. ಇವರು ಚಿಕಿತ್ಸೆ ನೀಡುತ್ತಿರುವುದು ದೊಡ್ಡ ಅಪರಾಧ ಅಂತ ಗೊತ್ತಿದ್ದರು ಹಳ್ಳಿ ಜನರ ಜೀವನದ ಜತೆಗೆ ಚೆಲ್ಲಾಟ ವಾಡುತ್ತಿದ್ದಾರೆ.
ವೈದ್ಯರ ಸಲಹೆ ಮೇರೆಗೆ ಮಾತ್ರ ಬೆರೊಬ್ಬ ಆರೋಗ್ಯ ಇಲಾಖೆ ಸಿಬ್ಬಂದಿಗಳು ಚಿಕಿತ್ಸೆ ನೀಡಬೇಕು. ಆದರೆ ಇಲ್ಲಿ ಎಂಬಿಬಿಎಸ್, ಬಿಎಎಮ್ಎಸ್ ಮುಗಿಸದ ಸಿಬ್ಬಂದಿಗಳೇ ವೈದ್ಯರಾಗಿದ್ದಾರೆ. ಇವರು ನೀಡಿದ ಚಿಕಿತ್ಸೆಯೇ ಇಲ್ಲಿ ಪೈನಲ್ ಎನ್ನೋವಾಗೆ ಆಗಿದೆ. ಹೆಸರಿಗೆ ಮಾತ್ರ ಆಸ್ಪತ್ರೆ ಇದಾಗಿದ್ದು, ರೋಗಿಗಳ ಪಾಲಿಗಂತು ನರಕಯಾತನೆ ಆಗಿದೆ. ಯಾಕಂದ್ರೆ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ. ಇಲ್ಲಿ ನರ್ಸ್ ಹಾಗೂ ಆಸ್ಪತ್ರೆ ಸಿಬ್ಬಂದಿಗಳೇ ಎಲ್ಲಾ ಕಾರುಬಾರು.
ಗರಸಂಗಿ ಆಸ್ಪತ್ರೆಗೆ ನಿಯೋಜನೆಗೊಂಡ ವೈದ್ಯ ಎಮ್.ಎಸ್ ಪಾಟೀಲ್ ಒಂದು ದಿನವೂ ಆಸ್ಪತ್ರೆಗೆ ಬಂದಿಲ್ಲ. ಹೆಸರಿಗೆ ಮಾತ್ರ ಆಸ್ಪತ್ರೆ ವೈದ್ಯರು ಎನ್ನುಂತೆ ಆಗಿದೆ. ಇಲ್ಲಿವರೆಗೂ ಆಸ್ಪತ್ರೆಗೆ ಬಂದೆ ಇಲ್ಲ. ವೈದ್ಯರ ಹಾಜರಾತಿ ಕೂಡ ಸಂಪೂರ್ಣ ಖಾಲಿ ಇದ್ದು, ಸಂಬಳ ಮಾತ್ರ ತೆಗೆದುಕೊಳ್ಳುತ್ತಿದ್ದಾರೆ. ಈ ಮಾಹಿತಿ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಸತೀಶ್ ತಿವಾರಿಗೆ ಗೊತ್ತಿದ್ದರು ಸಹ ಕಂಡು ಕಾಣದಂತೆ ಮೂಖರಂತೆ ವರ್ತಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ.
- Advertisement -
ಗುತ್ತಿಗೆ ಆಧಾರದ ನೌಕರರು ಹಾಗೂ ಖಾಯಂ ಸರ್ಕಾರಿ ನೌಕರರು ಮಧ್ಯಾಹ್ನ 2 ಗಂಟೆ ಆದರೆ ಸಾಕು ಯಾವೊಬ್ಬ ಸಿಬ್ಬಂದಿಗಳು ಈ ಆಸ್ಪತ್ರೆಯಲ್ಲಿ ಇರಲ್ಲ. ಒಟ್ಟು 7 ಜನ ಸಿಬ್ಬಂದಿಗಳಲ್ಲಿ ದಿನಂಪ್ರತಿ ಮೂವರು ಬರುವುದೇ ಅಪರೂಪ. ಯಾವುದೇ ರೋಗಿಗಳು ಮಧ್ಯಾಹ್ನದ ಮೇಲೆ ಬಂದ್ರೆ ಅವರ ಪಾಡು ಹೇಳತೀರದು.
- Advertisement -
ಸದ್ಯ ನಿಯೋಜನೆಗೊಂಡ ವೈದ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಗರಸಂಗಿ ಗ್ರಾಮದಲ್ಲಿ ಕರ್ತವ್ಯಕ್ಕೆ ಬರುತ್ತಿಲ್ಲ. ಸಿಬ್ಬಂದಿಗಳು ಸಹ ಮೂರು ದಿನಕ್ಕೊಮ್ಮೆ ಬಂದು ಹಾಜರಿ ಪುಸ್ತಕದಲ್ಲಿ ಸಹಿ ಹಾಕುತ್ತಾರೆ. ಸರ್ಕಾರ 24X7 ಸೇವೆ ಸಲ್ಲಿಸಬೇಕು ಎಂದು ಆದೇಶಿಸಿದ್ದರೂ ಅದನ್ನು ಯಾವೊಬ್ಬ ನೌಕರನು ಪಾಲಿಸುತ್ತಿಲ್ಲ. ವೈದ್ಯರ ಚಿಕಿತ್ಸೆಯ ಇಚ್ಛಾಶಕ್ತಿ ಕೊರತೆಯಿಂದ ಈ ಭಾಗದ ಬಡ ಒಳ ಹಾಗೂ ಹೋರ ರೋಗಿಗಳು ಪರದಾಡುವಂತಾಗಿದೆ. ಇದರಿಂದ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ಈ ಭಾಗದ ಜನರು ಮುಖ ಮಾಡುವಂತಾಗಿದೆ.
ಒಟ್ಟಿನಲ್ಲಿ ಇಲ್ಲಿನ ಆಸ್ಪತ್ರೆಯ ವೈದ್ಯ ಹಾಗೂ ಸಿಬ್ಬಂದಿಗಳ ಸೇವೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂಥಾಗಿದ್ದು, ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಆಸ್ಪತ್ರೆ ವೈದ್ಯ ಹಾಗೂ ಸಿಬ್ಬಂದಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಟ್ರೀಟ್ಮೆಂಟ್ ಕೊಡಿಸಿ, ಸಾರ್ವಜನಿಕರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವಂತೆ ಮಾಡುತ್ತಾರಾ ಎಂಬುದು ಕಾದುನೋಡಬೇಕಿದೆ.
ವೈದ್ಯರು ಒಂದು ತಿಂಗಳಿನಿಂದ ಬಂದೇ ಇಲ್ಲ. ಡಾಕ್ಟರ್ ಸಿಗದೇ ನರ್ಸ್ ಒಬ್ಬರೇ ಇಲ್ಲಿ ಡಾಕ್ಟರ್ ರೀತಿ ಚಿಕಿತ್ಸೆ ನೀಡುತ್ತಾರೆ. ಒಂದು ವೇಳೆ ಹೆಚ್ಚು ಕಡಿಮೆಯಾದ್ರೆ ಯಾರು ಹೊಣೆ, ನರ್ಸ್ ಸಹ ಮಧ್ಯಾಹ್ನ 2 ಗಂಟೆಗೆ ನ ನಮ್ಮ ಮುಂದೆಯೇ ಮನೆಗೆ ಹೋಗುತ್ತಾರೆ. ಮಧ್ಯಾಹ್ನದ ಮೇಲೆ ಯಾವೊಬ್ಬ ಸಿಬ್ಬಂದಿಗಳು ಈ ಆಸ್ಪತ್ರೆಯಲ್ಲಿ ಇರೋದಿಲ್ಲ.
ಗರಸಂಗಿ ಗ್ರಾಮಸ್ಥರು

