ಕಲಬುರಗಿ :— ಸತ್ಯಕಾಮ ಪತ್ರಿಕೆಯ ಪ್ರಧಾನ ಸಂಪಾದಕರು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾದ ಸನ್ಮಾನ್ಯ ಶ್ರೀ ಪಿ ಎಂ ಮಣ್ಣೂರ ಅವರ 75ನೇ ಹುಟ್ಟು ಹಬ್ಬದ ಭವ್ಯ ಸಮಾರಂಭ ಶ್ರೀ ಶ್ರೀನಿವಾಸರಾವ್ ಆರ್ ರಘೋಜಿ ಸಭಾ ಗ್ರಹ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸೂಪರ್ ಮಾರ್ಕೆಟ್ ಕಲಬುರಗಿಯಲ್ಲಿ ದಿನಾಂಕ 01-07-2023 ರಂದು ಸಾಯಂಕಾಲ 5-00 ಗಂಟೆಗೆ ವಿಜ್ರಮಣೆಯಿಂದ ಆಚರಿಸಲಾಗುತ್ತಿದೆ ಎಂದು ಸತ್ಯಕಾಮ ಪತ್ರಿಕೆಯ ಕಲಬುರಗಿ ಸ್ಥಾನಿಕ ಸಂಪಾದಕ ಶ್ರೀ ಆನಂದ್ ಮಣ್ಣೂರ ರವರು ತಿಳಿಸಿದ್ದಾರೆ.
ಪರಮಪೂಜ್ಯ ಶ್ರೀ ಜಗದ್ಗುರು ಡಾ .ಸಾರಂಗಧರ , ಸಾರಂಗ ಮಠ ಶ್ರೀಶೈಲಂ, ಸುಲಫಲ ಮಠ ಶಹ ಬಜಾರ್ ಕಲಬುರಗಿ ರವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸನ್ಮಾನ್ಯ ಶ್ರೀ ತಿಪ್ಪಣ್ಣಪ್ಪ ಕಮಕನೂರ ವಿಧಾನ ಪರಿಷತ್ ಸದಸ್ಯರು ಸತ್ಯಕಾಮ ವೆಬ್ಸೈಟ್ ಉದ್ಘಾಟಿಸಲಿದ್ದಾರೆ. ಸನ್ಮಾನ್ಯ ಶ್ರೀ ಪ್ರೊಫೆಸರ್ ದಯಾನಂದ ಅಗಸರ ಉಪಕುಲಪತಿಗಳು ಗುಲ್ಬರ್ಗ ವಿವಿ ಕಲಬುರಗಿ ಸಮಾರಂಭದ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆ ಸನ್ಮಾನ್ಯ ಶ್ರೀ ಲಿಂಗರಾಜಪ್ಪ ಅಪ್ಪ ಉಪಾಧ್ಯಕ್ಷರು ವಿಶ್ವ ಹಿಂದೂ ಪರಿಷತ್( ಉತ್ತರ) ವಹಿಸಲಿದ್ದಾರೆ. ಪಿ ಪಿ ಟಿ ಚಾಲನೆ ಸನ್ಮಾನ್ಯ ಶ್ರೀ ಬಸವರಾಜ ಮತ್ತಿಮೂಡ ಮಾನ್ಯ ಶಾಸಕರು ಕಲಬುರ್ಗಿ ಗ್ರಾಮೀಣ ಮತಕ್ಷೇತ್ರ ರವರ ಅಮೃತ ಹಸ್ತಗಳಿಂದ ನೆರವೇರಲಿದೆ. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಶ್ರೀ ಟಿ ವಿ ಶಿವಾನಂದನ್ ಹಾಗೂ ಶಶಿಕಾಂತ್ ಬಿ ಪಾಟೀಲ್ ಅಧ್ಯಕ್ಷರು ಕೆ ಕೆ ಸಿ ಸಿ ಐ ಕಲಬುರಗಿ ಆಗಮಿಸಲಿದ್ದಾರೆ.
ಭವ್ಯ ಸನ್ಮಾನ:- ಇದೆ ಸನ್ಮಾನ ಸಮಾರಂಭದಲ್ಲಿ ಸತ್ಯಕಾಮ ಪತ್ರಿಕೆಯು ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದು, ಹಿರಿಯ ಹಾಗೂ ಯುವ ಪತ್ರಕರ್ತರನ್ನು ಸನ್ಮಾನಿಸಲಾಗುವುದು ಎಂದು ಆನಂದ್ ಮಣ್ಣೂರ ತಿಳಿಸಿದ್ದಾರೆ. ಸನ್ಮಾನಿತ ಪುರಸ್ಕೃತರಲ್ಲಿ ಶ್ರೀ ಶಿವಕಾಂತಾಚಾರ್ಯ ಮಣ್ಣೂರ ಹಿರಿಯ ಪತ್ರಕರ್ತರು, ಶ್ರೀ ಎಸ್ ಬಿ ಜೋಶಿ ಹಿರಿಯ ವರದಿಗಾರರು ಪಿಟಿಐ ಕಲಬುರಗಿ, ಶ್ರೀಮತಿ ಶೀಲಾ ತಿವಾರಿ ಸಂಪಾದಕರು ಕನ್ನಡ ಚಿಂತಕ ಪತ್ರಿಕೆ, ಶ್ರೀ ಕೇದಾರ ಲಿಂಗಯ್ಯ ಹಿರೇಮಠ ಕಲಬುರ್ಗಿ ವಾಣಿ ಕನ್ನಡ ಪತ್ರಿಕೆ, ಶ್ರೀ ಮುಹಿಯುದ್ದೀನ್ ಪಾಷಾ ಸಂಪಾದಕರು ಇನ್ ಕ್ಲಾಬ್ ಎ ಡೆಕ್ಕನ್ ಸಂಪಾದಕರು ಉರ್ದು ಪತ್ರಿಕೆ ಹಾಗೂ ಶ್ರೀ ಮಹಿಪಾಲ ರೆಡ್ಡಿ ಮುನೂರ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳು ಇವರನ್ನು ಸನ್ಮಾನಿಸಲಾಗುವುದು ಎಂದು ಆನಂದ್ ಮಣ್ಣೂರ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.

