ಸತ್ಯಕಾಮ ವಾರ್ತೆ ಯಾದಗಿರಿ:
ಜಿಲ್ಲೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ನೇರ ನೇಮಕಾತಿ ಪರೀಕ್ಷೆ 2024ರ ಅಕ್ಟೋಬರ್ 26 ರಂದು ಯಾದಗಿರಿ ನಗರದ 03 ಪರೀಕ್ಷಾ ಕೇಂದ್ರಗಳಲ್ಲಿ 1491 ವಿದ್ಯಾರ್ಥಿಗಳು ಮಧ್ಯಾಹ್ನ 2.30 ರಿಂದ ಸಂಜೆ 4.30ರ ವರೆಗೆ ಮತ್ತು 2024ರ ಅಕ್ಟೋಬರ್ 27 ರಂದು ಜಿಲ್ಲೆಯ 21 ಪರೀಕ್ಷಾ ಕೇಂದ್ರಗಳಲ್ಲಿ 8836 ವಿದ್ಯಾರ್ಥಿಗಳು ಬೆಳಿಗ್ಗೆ 10.30 ರಿಂದ 12.30 ಗಂಟೆಯ ವರೆಗೆ ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 4.30ರ ವರೆಗೆ 02 ಅವಧಿಗಳಲ್ಲಿ ಈ ಕೆಳಗಿನ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ತಿಳಿಸಿದ್ದಾರೆ.
2153 ಸ ಪ ಪೂ ಕಾಲೇಜು ಯಾದಗಿರಿ, 2154–ಜವಹಾರ ಪ ಪೂ ಕಾಲೇಜು ಯಾದಗಿರಿ, 2155– ಬಾಲಕೀಯರ ಸರಕಾರಿ ಪದವಿ ಪೂರ್ವ ಕಾಲೇಜು ಯಾದಗಿರಿ, 2156–ನ್ಯೂ ಕನ್ನಡ ಪ ಪೂ ಕಾಲೇಜು ಯಾದಗಿರಿ, 2157–ಮಹಾತ್ಮ ಗಾಂಧಿ ಪ ಪೂ ಕಾಲೇಜು ಯಾದಗಿರಿ, 2158–ಡಾನ್ ಬಾಸ್ಕೊ ಪ ಪೂ ಕಾಲೇಜು ಯಾದಗಿರಿ, 2159–ಎಲ್‌ಕೆಇಟಿ ಬಾಲಕೀಯರ ಪ ಪೂ ಕಾಲೇಜು ಯಾದಗಿರಿ, 2160–ಸಭಾ ಪ ಪೂ ಕಾಲೇಜು ಯಾದಗಿರಿ, 2161–ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲೆ ವಿಭಾಗ) ಯಾದಗಿರಿ, 2162–ಸರಕಾರಿ ಪ್ರಥಮ ದರ್ಜೆ ಕಾಲೇಜು ಯಾದಗಿರಿ, 2163–ಬಾಲಕೀಯರ ಸರಕಾರಿ ಪ್ರಥಮ ದರ್ಜೆ ಕಾಲೇಜು ಯಾದಗಿರಿ, 2164–ಸ ಪ ಪೂ ಕಾಲೇಜು ಗುರುಮಿಠಕಲ್ , 2165-ಬಾಲಕೀಯರ ಸ ಪ ಪೂ ಕಾಲೇಜು ಗುರುಮಿಠಕಲ್ , 2166-ಸರಕಾರಿ ಪ್ರಥಮ ದರ್ಜೆ ಕಾಲೇಜು ಗುರುಮಿಠಕಲ್, 2167-ಸರಕಾರಿ ಪದವಿ ಪೂರ್ವ ಕಾಲೇಜು ಶಹಪ್ಮರ, 2168-ಎಸ್‌ಸಿ ಬಾಲಕೀರ ಪ ಪೂ ಕಾಲೇಜು ಶಹಪ್ಮರ, 2169–ಬಾಲಕೀಯರ ಸ ಪ ಪೂ ಕಾಲೇಜು ಶಹಪುರ, 2170-ಪ್ರಭು ಪ ಪೂ ಕಾಲೇಜು ಸುರಪ್ಮರ, 2171-ಡಾ.ಬಾಬಾ ಸಾಹೇಬ ಅಂಬೇಡ್ಕರ್ ಪ ಪೂ ಕಾಲೇಜು ರಂಗAಪೇಟ, 2172–ಸ ಪ ಪೂ ಕಾಲೇಜು ರಂಗAಪ್ಭೆಟ, 2173-ಪ್ರೀಯದರ್ಶಿನಿ ಪ ಪೂ ಕಾಲೇಜು ರಂಗAಪೇಟ ಪರೀಕ್ಷೆ ಕೇಂದ್ರಗಳು ಇದೆ.
ಪರೀಕ್ಷಾ ಕೇಂದ್ರಗಳ ಸೂತ್ತಲು 300 ಮೀಟರ ನಿಷೇದಿತ ಪ್ರದೇಶವೆಂದು ಘೋಷಿಸಲಾಗಿದೆ ಮತ್ತು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಅಳವಡಿಸಲಾಗಿ ಪರೀಕ್ಷೆಯ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದ್ದು ವಿಶೇಷವಾಗಿ ವಿದ್ಯಾರ್ಥಿಗಳು/ಪೋಷಕರ ಗಮನಕ್ಕೆ ಸದರಿ ಸ್ಪರ್ದಾತ್ಮಕ ಪರೀಕ್ಷೆಗೆ ವಸ್ತç ಸಂಹಿತೆ ಹಾಗೂ ವಿಶೇಷ ಸೂಚನೆಗಳು ಈ ಕೆಳಗಿನಂತಿರುತ್ತವೆ. ಪುರುಷ ಅಭ್ಯರ್ಥಿಗಳ ವಸ್ತç ಸಂಹಿತೆ ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಶರ್ಟ್ಗಳನ್ನು ಅನುಮತಿಸಲಾಗುವುದಿಲ್ಲವಾದ್ದರಿಂದ ಪುರಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್ಗಳನ್ನು ಧರಿಸುವುದು ಸಾದ್ಯವಾದಷ್ಟು ಕಾಲರ್‌ರಹಿತ ಶರ್ಟ್ಧರಿಸಲು ಆದ್ಯತೆ ನೀಡುವುದು. ಪ್ಯಾಂಟ್ ಮತ್ತು ಸರಳ ಪ್ಯಾಂಟ್ (ಜೇಬುಗಳು ಇಲ್ಲದಿರುವ/ಕಮ್ಮಿ ಜೇಬುಗಳಿರುವ) ಪುರುಷ ಅಭ್ಯರ್ಥಿಗಳಿಗೆ ಆದ್ಯತೆಯ ಡ್ರೆಸ್ ಕೋಡ್ ಆಗಿದೆ. ಕುರ್ತಾ ಪೈಜಾಮನ್ನು, ಜೀನ್ಸ್ ಪ್ಯಾಂಟ್ ಅನುಮತಿಸುವುದಿಲ್ಲ. ಪುರುಷ ಅಭ್ಯರ್ಥಿಗಳು ಧರಿಸುವ ಬಟ್ಟೆಗಳು ಹಗುರವಾಗಿರಬೇಕು ಅಂದರೆ ಜಿಪ್ ಪಾಕೆಟ್‌ಗಳು, ಪಾಕೆಟ್‌ಗಳು, ದೊಡ್ಡ ಬಟನ್‌ಗಳು ಮತ್ತು ವಿಸ್ತಾರವಾದ ಕಸೂತಿ ಇರುವ ಬಟ್ಟೆಗಳು ಇರಬಾರದು. ಪರಿಕ್ಷಾ ಹಾಲ್ ಒಳಗೆ ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಸ್ಯಾಂಡಲ್ ಅಥವಾ ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸುವುದು ಸೂಕ್ತ. ಅಭ್ಯರ್ಥಿಗಳು ಕುತ್ತಿಗೆಯ ಸುತ್ತ ಯಾವುದೇ ಲೋಹದ ಆಭರಣಗಳನ್ನು ಧರಿಸುವುದು ಅಥವಾ ಕಿವಿಯೋಲೆಗಳು, ಉಂಗುರಗಳು ಮತ್ತು ಕಡಗಗಳನ್ನು ಧರಿಸುವುದು ನಿಷೇಧಿಸಲಾಗಿದೆ.
- Advertisement -
ಮಹಿಳಾ ಅಭ್ಯರ್ಥಿಗಳ ವಸ್ತç ಸಂಹಿತೆ ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವುದು ನಿಷೇಶಿಸಲಾಗಿದೆ. ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಪಟ್ಟೆಗಳನ್ನು/ಜೀನ್ಸ್ ಪ್ಯಾಂಟ್ ಧರಿಸಬಾರದು, ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಅವರಿಗೆ ಮುಜುಗರವಾಗದಂತೆ ಮತ್ತು ನಾವು ಉಲ್ಲೇಖಿಸಿರುವ ನಿಯಮದಂತೆ ಧರಿಸುವಂತೆ ನಿರ್ದೇಶಿಸಲಾಗಿದೆ.ಎತ್ತರವಾದ ಹಿಮ್ಮಡಿಯ ಶೂಗಳನ್ನು/ಚಪ್ಪಲಿಗಳನ್ನು ಮತ್ತು ದಪ್ಪವಾದ ಅಡಿ ಭಾಗ ಹೊಂದಿರುವ ಶೂಗಳನ್ನಾಗಲಿ/ಚಪ್ಪಲಿಗಳನ್ನಾಗಲಿ ಧರಿಸಬಾರದು, ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳು ಧರಿಸುವುದು ಕಡ್ಡಾಯವಾಗಿದೆ.ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಿದೆ. (ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ). ಪರೀಕ್ಷೆಯಲ್ಲಿ ಪರೀಕ್ಷಾ ದುರಾಚರಣೆಯನ್ನು ತಡೆಗಟ್ಟಲು ಪ್ರತಿ ಕೇಂದ್ರಕ್ಕೆ ವಿಶೇಷ ಜಾಗೃತದಳ ಮತ್ತು ವಿಕ್ಷಕರನ್ನು ನೇಮಿಸಿದೆ, ಪರೀಕ್ಷಾ ನಡೆಯುವ ದಿನಗಳಂದು ಯಿರಾಕ್ಸ ಅಂಗಡಿ, ಪುಸ್ತಕ ಮಳಿಗೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ಪರೀಕ್ಷ ಕೇಂದ್ರಗಳಲ್ಲಿ ಯಾವುದೇ ತರಹದ ಎಲೆಕ್ಟಾçನಿಕ್ ವಸ್ತುಗಳು ಮೊಬೈಲ್, ಪೆನ್ ಡ್ರೆöÊವ್‌ಗಳು, ಇಯರ್ ಪೋನ್, ಮೈಕ್ರೋಪೋನ್‌ಗಳೂ, ಬ್ಲೂ ಟೂಥ್ ಸಾಧನಗಳು ಮತ್ತು ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿ ಒಳಗೆ ಅನುಮತಿಸಲಾಗುವುದಿಲ್ಲ. ಪರೀಕ್ಷೆಗಳನ್ನು ಪಾರದರ್ಶಕವಾಗಿ ಕೈಗೊಳ್ಳಲು ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

