ಸತ್ಯಕಾಮ ವಾರ್ತೆ ಗುರುಮಠಕಲ್ :
ಸ್ವಾಮಿ ವಿವೇಕಾನಂದರ ಬೋಧನೆಗಳು ಜಗತ್ತಿನಾಧ್ಯಾಂತ ಲಕ್ಷಾಂತರ ಜನರಿಗೆ, ಅದರಲ್ಲೂ ವಿಶೇಷವಾಗಿ ಯುವ ಜನತೆಗೆ ಸ್ಪೂರ್ತಿ ನೀಡುತ್ತಲೇ ಇದೆ ಗಣೇಶ್ ಬುರಗಪಲ್ಲಿ ಅಭಿಪ್ರಾಯಪಟ್ಟರು.
ಪಟ್ಟಣಕ್ಕೆ ಹತ್ತಿರದಲ್ಲಿರುವ ಬುರಗಪಲ್ಲಿ ಗ್ರಾಮದಲ್ಲಿ ವಿವೇಕಾನಂದರ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇಶದಾದ್ಯಂತ ಮಹಾನ್ ಅಧ್ಯಾತ್ಮಿಕ ನಾಯಕ, ತತ್ವಜ್ಞಾನಿ, ಚಿಂತಕ ಹಾಗೂ ವಿಶ್ವ ಸನ್ಯಾಸಿ ಸ್ವಾಮಿ ವಿವೇಕಾನಂದರ 162 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದರ ಚಿಂತನೆಗಳು ಯಾವಾಗಲೂ ಯುವಕರನ್ನು ಪ್ರೇರೇಪಿಸುವಂತಿವೆ. ಜೊತೆಗೆ ಅವರಲ್ಲಿ ಹೊಸ ಶಕ್ತಿ ಮತ್ತು ಪ್ರಜ್ಞೆಯನ್ನು ತುಂಬುತ್ತಿವೆ ಎಂದರು.
ಸ್ವಾಮಿ ವಿವೇಕಾನಂದರನ್ನು ಜಗತ್ತಿಗೆ ಪರಿಚಯಿಸಿದ ಚಿಕಾಗೋ ಭಾಷಣ
- Advertisement -
ಸ್ವಾಮಿ ವಿವೇಕಾನಂದರು 1863 ರ ಜನವರಿ 12 ರಂದು ಕೋಲ್ಕತ್ತಾದಲ್ಲಿ ಜನಿಸಿದ್ದರು. 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿನಲ್ಲಿ ಭಾಷಣದ ಮೂಲಕ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡರು. ವಿವೇಕಾನಂದರ ಅಂದಿನ ಭಾಷಣ ಇತಿಹಾಸದಲ್ಲಿ ಅವರ ಅತ್ಯಂತ ಪ್ರಸಿದ್ದ ಕ್ಷಣಗಳಲ್ಲಿ ಒಂದಾಗಿದೆ. ತಮ್ಮ ಭಾಷಣದ ಆರಂಭದಲ್ಲಿ ಸ್ವಾಮಿ ವಿವೇಕಾನಂದರು, ‘ಅಮೆರಿಕದ ಸಹೋದರ ಸಹೋದರಿಯರೇ’ ಎಂದು ಹೇಳಿದಾಗ ಸದನವು ಎರಡು ನಿಮಿಷಗಳ ಕಾಲ ಚಪ್ಪಾಳೆಯನ್ನು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿತ್ತು. ಅಂದಿನಿಂದ, ಭಾರತ ಮತ್ತು ಭಾರತೀಯ ಸಂಸ್ಕೃತಿಗೆ ಪ್ರಪಂಚದಾದ್ಯಂತ ಮಾನ್ಯತೆ ಸಿಕ್ಕಿತು. ಕೇವಲ 30ನೇ ವಯಸ್ಸಿನಲ್ಲಿ, ವಿವೇಕಾನಂದರು ಹಿಂದುತ್ವದ ದೃಷ್ಟಿಕೋನದಿಂದ ಸಹೋದರತ್ವದ ಪಾಠವನ್ನು ಜಗತ್ತಿಗೆ ಕಲಿಸಿದರು. ಧರ್ಮಗಳ ಸಂಸತ್ತಿನಲ್ಲಿ ಈ ಯುವ ಸನ್ಯಾಸಿ ಮಾಡಿದ ಭಾಷಣದಿಂದ ಇಡೀ ಜಗತ್ತು ಮಂತ್ರಮುಗ್ಧವಾಯಿತು.
ಈ ಸಂಧರ್ಭದಲ್ಲಿ ಮಹೇಂದ್ರ , ನರಸಿಂಹಲು , ಬ್ರಹ್ಮನಂದ, ಕೃಷ್ಣ , ಪರುಶುರಾಮ, ರಮೇಶ್, ಗಣೇಶ್, ರಾಜು,ಶಿವು, ವೆಂಕಟ, ದಸ್ತಪ್ಪ ಉಪಸ್ಥಿತರಿದ್ದರು.

