ಸತ್ಯಕಾಮ ವಾರ್ತೆ ಯಾದಗಿರಿ:
ಚುನಾವಣಾ ಆಯೋಗದ ಸೂಚನೆಯನ್ನು ಉಲ್ಲಂಘಿಸಿ ಕೆಲವು ಕಡೆ ಮತದಾರರು ಮತದಾನದ ನಂತರ ಮೊಬೈಲ್ ರೆಕಾರ್ಡ್ ಹಾಗೂ ಸೆಲ್ಫಿ ಕ್ಲಿಕಿಸಿಕೊಂಡಿರುವ ಘಟನೆಗಳು ಜಿಲ್ಲೆಯ ಕೆಲವಡೆ ನಡೆದಿವೆ.
ಮತಗಟ್ಟೆಯೊಳಗೆ ಮೊಬೈಲ್ ತೆಗೆದುಕೊಂಡು ಹೋಗಬಾರದು ಎಂಬ ಆದೇಶವಿದ್ರು, ಕೂಡ ಜಿಲ್ಲೆಯ ಕೆಲವು ಕಡೆ ಹಲವು ಯುವಕರು ತಾವು ಮತದಾನ ಮಾಡಿದ ವೀಡಿಯೋ, ಪೊಟೋ ತೆಗದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಒಂದು ಶೋಕಿಯಾಗಿದೆ.
ಇದಕ್ಕೆ ಸಾಕ್ಷಿಯಂತೆ ವಡಗೇರಾ ತಾಲೂಕಿನ ಕಾಡಂಗೇರಾ (ಬೀ) ಗ್ರಾಮದಲ್ಲಿ ಯುವಕನೊಬ್ಬ ಬಿಜೆಪಿ ಪಕ್ಷಕ್ಕೆ ಮತ ಹಾಕಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಜೊತೆಗೆ, ಬ್ಯಾಲೆಟ್ ಪೇಪರ್ ಮುದ್ರಣ ಆಗುವುದನ್ನೂ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ, ನಂತರ ಕೆಲ ಗಂಟೆಗಳ ನಂತರ ತೆಗೆದು ಹಾಕಿದ್ದೇನೆ.
- Advertisement -
ಇದಲ್ಲದೆ ಯಾದಗಿರಿಯ ಗಂಗು ಮಡಿವಾಳ ಎಂಬ ಯುವಕ ಬಿಜೆಪಿ ಪಕ್ಷಕ್ಕೆ ಮತ ಹಾಕಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಜೊತೆಗೆ, ಬ್ಯಾಲೆಟ್ ಪೇಪರ್ ಮುದ್ರಣ ಆಗುವುದನ್ನೂ ವಿಡಿಯೋ ಮಾಡಿಕೊಂಡು ಫೇಸ್ ಬುಕ್, ವಾಟ್ಸಾಪ್ ಸ್ಟೇಟ್ ಸನಲ್ಲಿ ಹಂಚಿಕೊಂಡಿದ್ದಾರೆ.

