
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ್ ಬಿರಾದಾರ ಮಾತನಾಡಿ, ಏಡ್ಸ್ಗೆ ಚಿಕಿತ್ಸೆ ಸಾಧ್ಯ. ಆದರೆ ಸಂಪೂರ್ಣ ಗುಣಮುಖರಾಗಲು ಅಸಾಧ್ಯ. ಈ ಕಾರಣದಿಂದ ರೋಗಕ್ಕೆ ತುತ್ತಾಗದಂತೆ ಎಚ್ಚರ ವಹಿಸಬೇಕು. ಏಡ್ಸ್ ಕುರಿತು ಅರಿವು ಹೊಂದಬೇಕು. ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಸಂಜೀವಕುಮಾರ ಸಿಂಗ್ ರಾಯಚೂರಕರ್ ಮಾತನಾಡಿ, ಯುವಕ ಯುವಕರಲ್ಲಿ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದೆ. ಹಾನಿಕಾರಕ ಈ ರೋಗ ಸಂಪೂರ್ಣ ಗುಣಮುಖಕ್ಕೆ ಲಸಿಕೆ ಲಭ್ಯವಾಗಿಲ್ಲ. ಆದರೆ ಇದನ್ನು ತಡೆಗಟ್ಟಲು ವಿಧಾನ ಸುಲಭ. ಅಸುರಕ್ಷಿತ ಲೈಂಗಿಕ ಪ್ರಕ್ರಿಯೆಯಿಂದ ಈ ರೋಗ ಬರುತ್ತದೆ. ನಿರ್ಲಕ್ಷದ ಸೂಜಿಗಳಿಂದ ರೋಗ ಬರುತ್ತದೆ. ತಾಯಿಯಿಂದ ಮಗುವಿಗೆ ಬರುತ್ತದೆ. ಇದನ್ನು ತಡೆಗಟ್ಟ ಬಹುದು.ಅಸುರಕ್ಷಿತ ಲೈಂಗಿಕ ಸಂಬAಧದಿAದ ಗ್ರಾಮೀಣ ಭಾಗದಲ್ಲಿಯೂ ಏಡ್ಸ್ ಹೆಚ್ಚಾಗುತ್ತಿದೆ. ಲೈಂಗಿಕ ಕ್ರಿಯೆಗಳು ಮದುವೆ ಮುಂಚೆ ನಡೆಯುತ್ತಿರುವುದು ಕಳವಳ ಸಂಗತಿ ಎಂದರು.
- Advertisement -
ಆರಂಭದಲ್ಲಿ ಗಾಂಧಿ ವೃತ್ತದಲ್ಲಿ ಏಡ್ಸ್ ಜಾಗೃತಿ ಜಾಥಾಕ್ಕೆ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಮರೆಪ್ಪ ಜಾಥಾಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಸಾಜೀದ್, ತಾಲೂಕು ಆರೋಗ್ಯಧಿಕಾರಿ ಡಾ. ಹನುಮಂತ ರೆಡ್ಡಿ, ಐಎಮ್ ಎ ಜಿಲ್ಲಾಧ್ಯಕ್ಷ ಡಾ.ಚಂದ್ರಕಾAತ ಪೂಜಾರಿ, ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ನಿರ್ಮಲಾ ಸಿನ್ನೂರ್, ಡಾ.ಶರಣಬಸಪ್ಪ ಎಲ್ಹೇರಿ, ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ , ತುಳಸಿರಾಮ, ಅಮರೇಶ ಬೋತಿ ಇದ್ದರು. ಇದೆ ಸಂದರ್ಭದಲ್ಲಿ ಹೆಚ್.ಐ.ವಿ ಸಮುದಾಯಕ್ಕೆ ಸಹಾಯ, ಸಹಕಾರ ಮತ್ತು ಹೆಚ್ ಐ.ವಿ ಪರೀಕ್ಷೆ ಮಾಡುವಲ್ಲಿ ಗುರಿ ಸಾಧನೆ ಮಾಡಿದ್ದಕ್ಕಾಗಿ ಸಂಬAಧಿಸಿದ ಸಿಬ್ಬಂದಿಗಳನ್ನು ಸನ್ಮಾನ ಮಾಡಲಾಯಿತು.

