ಸತ್ಯಕಾಮ ವಾರ್ತೆ ಯಾದಗಿರಿ :
ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರಿನ ನಳಗಳಿಗೆ ಮೋಟಾರ ಅಳವಡಿಸಬಾರದು ಎಂದು ಯಾದಗಿರಿ ನಗರಸಭೆ ಪೌರಾಯುಕ್ತರು ರಜನಿಕಾಂತ ಶೃಂಗೇರಿ ಅವರು ತಿಳಿಸಿದ್ದಾರೆ.
ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರಿನ ನಳಗಳಿಗೆ ನಿಯಮ ಮೀರಿ ಮೋಟಾರುಗಳನ್ನು ಅಳವಡಿಸುತ್ತಿರುವುದರಿಂದ ಬಡಾವಣೆಯ ಕೊನೆಯ ಭಾಗದ ಮನೆಗಳಿಗೆ ಪೈಪಿನಲ್ಲಿ ನೀರು ತಲುಪದೇ ಇರುವುದರಿಂದ ಇದರಿಂದ ಅನೇಕ ಮನೆಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರು ಬರದೇ ತೊಂದರೆಯಾಗುತ್ತಿದ್ದು, ಕುಡಿಯುವ ನೀರಿನ ಕೊರತೆ ಉಂಟಾಗುತ್ತಿದೆ ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಮೋಟಾರು ಬಳಸುವುದನ್ನು ನಿಲ್ಲಿಸಿದಲ್ಲಿ ಎಲ್ಲಾ ಮನೆಗಳಿಗೆ ನೀರು ಸಿಗುವ ಸಾಧ್ಯತೆ ಇರುತ್ತದೆ. ಯಾದಗಿರಿ ನಗರದ ಸಾರ್ವಜನಿಕರಲ್ಲಿ ನಗರಸಭೆದಿಂದ ಮನವಿ ತಾವುಗಳು ತಮ್ಮ ನಳಗಳಿಗೆ ಮೋಟಾರ ಅಳವಡಿಸುವುದನ್ನು ನಿಲ್ಲಿಸಬೇಕು, ತಪ್ಪಿದಲ್ಲಿ ನಗರಸಭೆದಿಂದ ದಂಡ ವಿಧಿಸಲಾಗುವುದು ಮತ್ತು ನಗರದಲ್ಲಿರುವ ಅಕ್ರಮ ಸಂಪರ್ಕಗಳನ್ನು 2024ರ ಡಿಸೆಂಬರ್ 15ರ ಒಳಗೆ ನಗರಸಭೆದಿಂದ ನಿಗಧಿಪಡಿಸಲಾದ ಶುಲ್ಕವನ್ನು ಪಾವತಿಸಿ ಸಕ್ರಮ ಮಾಡಿಕೊಳ್ಳಲು ಸಾರ್ವಜನಿಕ ಗಮನಕ್ಕೆ ತಿಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -

