Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News | Districts Yadgir

ಬಿಲ್ ಮಂಜೂರಿಗೆ ಲಂಚದ ಬೇಡಿಕೆ: ಇಬ್ಬರು ಜೆಸ್ಕಾಂ ಜೆಇಗಳ ವಿರುದ್ಧ ಲೋಕಾಯುಕ್ತ ಟ್ರ್ಯಾಪ್‌

9 ಸಾವಿರಕ್ಕೆ ಬೇಡಿಕೆ, 3 ಸಾವಿರ ಸ್ವೀಕಾರದ ಆರೋಪ

ಯಾದಗಿರಿ: ಎಂಟು ತಿಂಗಳ ಹಿಂದೆ ಪೂರ್ಣಗೊಂಡಿದ್ದ ಕಾಮಗಾರಿಯ ಬಿಲ್ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಸುರಪುರದ ಜೆಸ್ಕಾಂನ ಇಬ್ಬರು ಕಿರಿಯ ಎಂಜಿನಿಯರ್‌ಗಳ ವಿರುದ್ಧ ಯಾದಗಿರಿ ಲೋಕಾಯುಕ್ತ ಪೊಲೀಸರು ಟ್ರ್ಯಾಪ್‌ ಕಾರ್ಯಾಚರಣೆ ನಡೆಸಿದ್ದಾರೆ.

ಜೆಸ್ಕಾಂ ಕಿರಿಯ ಎಂಜಿನಿಯರ್‌ಗಳಾದ ಸಚಿನ್ ಯೆಡಕೆ ಮತ್ತು ಶ್ರೀಶೈಲ ತಮ್ಮದಡ್ಡಿ ಅವರು 3,63,942 ಮೊತ್ತದ ಕಾಮಗಾರಿಯ ಬಿಲ್ ಮಂಜೂರು ಮಾಡಲು 9 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, 3 ಸಾವಿರ ಸ್ವೀಕರಿಸಿದ ಆರೋಪ ಕೇಳಿಬಂದಿದೆ. ಈ ಕುರಿತು ಟಿಂಟಿಣಿ ಗ್ರಾಮದ ಭೈರಣ್ಣ ದೇವೇಂದ್ರ ಅಂಬಿಗೇರ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾದಗಿರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 08/2026ರ ಅಡಿಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಸೆಕ್ಷನ್ 7(ಎ) ಅಡಿ ಪ್ರಕರಣ ದಾಖಲಿಸಲಾಗಿದೆ.

ಯಾದಗಿರಿ ಲೋಕಾಯುಕ್ತ ಪೊಲೀಸ್ ಘಟಕದ ಎಸ್‌ಪಿ ಹಾಗೂ ಡಿವೈಎಸ್‌ಪಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಪ್ರದೀಪ್ ತಲಕೇರಿ ಅವರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿದರು. ಡಿವೈಎಸ್‌ಪಿ ಜೆ.ಎಚ್. ಇನಾಮದಾರ್ ಅವರು ತಂಡದ ಮೇಲ್ವಿಚಾರಣೆ ವಹಿಸಿದ್ದರು. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Author
Kudhan Sab
ನಾನು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ ಆರು ವರ್ಷಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಸ್ತುತ ಸತ್ಯಕಾಮ ಪ್ರಾದೇಶಿಕ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದು, ಜನಪರ ವಿಚಾರಗಳು, ಸ್ಥಳೀಯ ಸಮಸ್ಯೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ಸುದ್ದಿಗಳನ್ನು ವಸ್ತುನಿಷ್ಠವಾಗಿ ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೋಳಿ ಪಂಜದ ಮೇಲೆ ಪೊಲೀಸರ ದಾಳಿ- 10 ಮಂದಿ ವಿರುದ್ಧ ಕೇಸ್‌ಬಿಲ್ ಮಂಜೂರಿಗೆ ಲಂಚದ ಬೇಡಿಕೆ: ಇಬ್ಬರು ಜೆಸ್ಕಾಂ ಜೆಇಗಳ ವಿರುದ್ಧ ಲೋಕಾಯುಕ್ತ ಟ್ರ್ಯಾಪ್‌ಬಿಲ್ ಮಂಜೂರಿಗೆ ಲಂಚದ ಬೇಡಿಕೆ: ಇಬ್ಬರು ಜೆಸ್ಕಾಂ ಜೆಇಗಳ ವಿರುದ್ಧ ಲೋಕಾಯುಕ್ತ ಟ್ರ್ಯಾಪ್‌ಪ್ರವಾಸಿ ತಾಣಗಳ ಪರಿಚೆಯಾತ್ಮಕ ಪುಸ್ತಕ  ಬಿ ಎಸ್ ದೇಸಾಯಿ ಅವರ ಕನಸುಗಳ ಕಡಲಾಚೆಜಗನ್ಮಾತೆ ಭಘಳಾಂಬದೇವಿ ನವರಾತ್ರಿ ಉತ್ಸವಕ್ಕೆ ಅಬ್ಬೆತುಮಕೂರು ಸಜ್ಜುಶಾಸಕ ಕಂದಕೂರ ಕ್ಷಮೆಗೆ ಟಿಪ್ಪರ್ ಮಾಲೀಕರ ಆಗ್ರಹಅಕ್ರಮ ಮದ್ಯ ಮಾರಾಟ: ಮಾರುವವರು ಸಿಕ್ಕಿಬಿದ್ದರು, ಪೂರೈಕೆದಾರರು ಪಾರಾದರೇ?ಸೈನಿಕರ ತ್ಯಾಗಕ್ಕೆ ಸಮಾಜದ ಗೌರವ ಅಗತ್ಯ.!ಸರ್ಕಾರದ ಬಳಿ ಅಭಿವೃದ್ಧಿಗೆ ಅನುದಾನವಿಲ್ಲ: ಶಾಸಕ ಶರಣಗೌಡ ಕಂದಕೂರಎಂ.ಸಿ.ಸಿ. ಕಟ್ಟುನಿಟಾಗಿ ಪಾಲಿಸಿ,ಶಾಂತಿಯುತ ಚುನಾವಣೆಗೆ ಸರ್ವ ಸಿದ್ಧತೆ ಕೈಗೊಳ್ಳಿ-ಶಿವಕುಮಾರ ಕೆ.ಬಿ